ಕರ್ನಾಟಕ

karnataka

ETV Bharat / state

ಹೋಟೆಲ್​​​​​​ ಎದುರೇ ರೌಡಿಶೀಟರ್​​​​​​ ಭೀಕರ ಕೊಲೆ... ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಂಕರ ದೃಶ್ಯ! - ಬೆಂಗಳೂರು ರೌಡಿಶೀಟರ್​ ಕೊಲೆ,

ರೌಡಿಶೀಟರ್ ಬೆಸ್ತಮಾನಹಳ್ಳಿ ಸುನಿಲ್​ನನ್ನು ಕೆಲ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

RowdySheeter murder, Bangalore RowdySheeter murder, Bangalore RowdySheeter murder news, Bangalore crime news, ರೌಡಿಶೀಟರ್​ ಕೊಲೆ, ಬೆಂಗಳೂರಿನಲ್ಲಿ ರೌಡಿಶೀಟರ್​ ಕೊಲೆ, ಬೆಂಗಳೂರು ರೌಡಿಶೀಟರ್​ ಕೊಲೆ, ಬೆಂಗಳೂರು ಅಪರಾಧ ಸುದ್ದಿ,
ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಂಕರ ದೃಶ್ಯ

By

Published : Aug 1, 2020, 11:47 AM IST

ಆನೇಕಲ್: ಹಲವು ಕೊಲೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ ರೌಡಿಶೀಟರ್ ಬೆಸ್ತಮಾನಹಳ್ಳಿ ಸುನಿಲ್​ ಬರ್ಬರವಾಗಿ ಕೊಲೆಯಾಗಿದ್ದಾನೆ.

ಇಲ್ಲಿನ ಬೆಸ್ತಮಾನಹಳ್ಳಿಯ ನಿವಾಸಿ ಸುನಿಲ್​ ಮೈಸೂರು ರಸ್ತೆಯ ಕದಂಬ ಹೋಟೆಲ್ ಅಂಗಳದ ಪಾರ್ಕಿಂಗ್​ನಲ್ಲಿ ದುಷ್ಕರ್ಮಿಗಳ ಗ್ಯಾಂಗ್​ವೊಂದು ಮಾಡಿದ ದಾಳಿ ವೇಳೆ ಬಲಿಯಾಗಿದ್ದಾನೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಂಕರ ದೃಶ್ಯ

ರಾತ್ರಿ 7.30ರ ಸಮಯದಲ್ಲಿ ತನ್ನ ಹುಂಡೈ ವೆರ್ನಾ ಪ್ಲೂಯಿಡಿಕ್ ಕಾರಿನಲ್ಲಿ ಹೋಟೆಲ್ ಮುಂದೆ ಇದ್ದಾಗ ನಡೆದ ಗ್ಯಾಂಗ್ ಅಟ್ಯಾಕ್​ನಲ್ಲಿ ಬರ್ಬರವಾಗಿ ಕೊಲೆಯಾಗಿರುವುದು ಸಿಸಿ ಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಂಕರ ದೃಶ್ಯ

ಡೆಡ್ಲಿ ಅಟ್ಯಾಕ್​...

ಕುಂಬಳಗೋಡು ಪೊಲೀಸ್ ಠಾಣಾ ಸರಹದ್ದಿನ ಕದಂಬ ಹೋಟೆಲ್ ಮುಂಭಾಗ ನಿಂತಿದ್ದ ಕಾರಿಗೆ ಏಕಾಏಕಿ ಬಂದೆರಗಿದ ಆರೇಳು ಮಂದಿ ಯುವಕರ ಪಡೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಂಕರ ದೃಶ್ಯ

ಕಾಪಾಡಲು ಯತ್ನಿಸಿದ ಚಾಲಕ!

ಡೆಡ್ಲಿ ಅಟ್ಯಾಕ್​ ವೇಳೆ ಕಾರಿನ ಚಾಲಕ ತನ್ನ ಪ್ರಾಣವನ್ನು ಪಣಕ್ಕಿಟ್ಟು ರೌಡಿಶೀಟರ್ ಸುನಿಲ್​ನನ್ನು ಕಾಪಾಡಲು ಯತ್ನಿಸಿದ್ದಾನೆ. ಆದ್ರೂ ಸಾಧ್ಯವಾಗಲಿಲ್ಲ. ಬಳಿಕ ಕಾರಿನ ಚಾಲಕ ಹಾರೋಹಳ್ಳಿ ಸಮಂತ್ ಕಾರಿನೊಂದಿಗೆ ಸುನಿಲ್ ದೇಹವನ್ನು ಅಲ್ಲೆ ಬಿಟ್ಟು ರಾತ್ರಿಯೇ ಜಿಗಣಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ಸಂಪೂರ್ಣ ವಿವರ ನೀಡಿದ್ದಾನೆ. ಈ ಕೊಲೆಯಿಂದ ಆನೇಕಲ್ ಬೆಚ್ಚಿ ಬಿದ್ದಿದೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಂಕರ ದೃಶ್ಯ

ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details