ಕರ್ನಾಟಕ

karnataka

ETV Bharat / state

ಸಿಸಿಬಿ ದಾಳಿ ವೇಳೆ ನಾಪತ್ತೆಯಾಗಿದ್ದ ರೌಡಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ - ಸಿಸಿಬಿ

ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ನಾಪತ್ತೆಯಾಗಿದ್ದ ರೌಡಿ ಸುನಿಲ್, ಭಾನುವಾರ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾನೆ. ಹೀಗಿದ್ದರೂ ಆತನನ್ನು ಪೊಲೀಸರು ಬಂಧಿಸದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Rowdy who went missing during the CCB attack
ಸಾರ್ವಜನಿಕ ಕಾರ್ಯಕ್ರಮದಲ್ಲಿ ರೌಡಿ ಪ್ರತ್ಯಕ್ಷ

By

Published : Nov 28, 2022, 12:45 PM IST

Updated : Nov 28, 2022, 9:25 PM IST

ಬೆಂಗಳೂರು: ಅಪರಾಧ ಚಟುವಟಿಕೆ ನಡೆಸುತ್ತಿರುವ ಶಂಕೆಯ ಮೇರೆಗೆ ರೌಡಿಗಳ ಮನೆ ಮೇಲೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ದಾಳಿ ನಡೆಸಿದಾಗ ತಲೆಮರೆಸಿಕೊಂಡಿದ್ದ ಸೈಲೆಂಟ್ ಸುನಿಲ್​ ಎಂಬಾತ ನಿನ್ನೆ ಚಾಮರಾಜಪೇಟೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾನೆ. ಹೀಗಿದ್ದರೂ ಪೊಲೀಸರು ಆತನನ್ನು ವಶಕ್ಕೆ‌ ಪಡೆದುಕೊಳ್ಳದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಇದೇ ತಿಂಗಳ 23 ರಂದು ಬೆಂಗಳೂರು ನಗರದ 86 ಮಂದಿ ರೌಡಿಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಅಪರಾಧ ಕೃತ್ಯದಲ್ಲಿ ಭಾಗಿಯಾದ ಶಂಕೆಯ ಮೇರೆಗೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದರು. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು.‌

ದಾಳಿಯ ಸಂದರ್ಭದಲ್ಲಿ ಸೈಲೆಂಟ್ ಸುನಿಲ್ ಸೇರಿದಂತೆ ಕೆಲವು ರೌಡಿಗಳು ಪರಾರಿ ಆಗಿದ್ದರು‌. ಈ ಮಧ್ಯೆ ನಿನ್ನೆ ಚಾಮರಾಜಪೇಟೆಯಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಸುನಿಲ್ ಹಾಜರಾಗಿದ್ದ. ಈ ಬಗ್ಗೆ ಅರಿತಿದ್ದರೂ ಸಿಸಿಬಿ ವಶಕ್ಕೆ ಪಡೆದುಕೊಳ್ಳದಿರುವುದು ಸಂಶಯಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಸಿಸಿಬಿ ದಾಳಿ: 25 ರೌಡಿಗಳು ವಶಕ್ಕೆ

ಈ ಬಗ್ಗೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾದ ಶರಣಪ್ಪ ಮಾತನಾಡಿ, ಕಳೆದ ವಾರ ಸಿಸಿಬಿ ಪೊಲೀಸರು ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದರು. ಆಗ ಕೆಲವರು ಮನೆಯಲ್ಲಿ ಇರಲಿಲ್ಲ. ಇದ್ದವರನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಲಾಗಿತ್ತು. ಮನೆಯಲ್ಲಿ ಇಲ್ಲದ 9 ರೌಡಿಗಳನ್ನು ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅದರಲ್ಲಿ ಸೈಲೆಂಟ್ ಸುನಿಲ್, ಸೈಕಲ್ ರವಿ, ಮುಲಾಮ, ರೋಹಿತ್ ಸೇರಿ ಹಲವರ ಮೇಲೆ ನಿಗಾ ಇಟ್ಟಿದ್ದೆವು‌ ಎಂದಿದ್ದಾರೆ.

ಸಿಸಿಬಿ ಜಂಟಿ ಪೊಲೀಸ್ ಆಯುಕ್ತರ ಪ್ರತಿಕ್ರಿಯೆ

ಭಾನುವಾರ ಒಂದು ಕಾರ್ಯಕ್ರಮ ಆಗಿದೆ. ಅಲ್ಲಿ ಸುನಿಲ್ ಭಾಗವಹಿಸಿರುವುದು ಗಮನಕ್ಕೆ ಬಂದಿದೆ. ಯಾರ ಮೇಲೆ ಕೇಸ್ ಇವೆ ಎಂಬುದನ್ನು ಗಮದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಮುಲಾಮ, ರಾಜ ದೊರೈ, ರೋಹಿತ್ ಗೌಡ, ಮಂಜು ಹಾಗೂ ಗಜೇಂದ್ರ ಸೇರಿ 9 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಯಾರ ಮೇಲೆ ಪ್ರಕರಣಗಳಿವೆಯೋ ಅಂತವರ ಮೇಲೆ ಕ್ರಮ ಜರುಗಿಸಲಾಗುವುದು. ಇವರಲ್ಲಿ ಸುನಿಲ್ ಮೇಲೆ ಸದ್ಯ ಯಾವುದೇ ಪ್ರರಕಣ ಬಾಕಿ ಉಳಿದಿಲ್ಲ. ಯಾವುದೇ ವಾರೆಂಟ್ ಕೂಡ ಬಾಕಿ ಇರಲಿಲ್ಲ. ಅಲ್ಲದೆ, ಯಾವುದೇ ರಾಜಕೀಯ ನಾಯಕರ ಒತ್ತಡವೂ ನಮಗಿಲ್ಲ. ರೌಡಿಶೀಟ್​ ವಿಚಾರದಲ್ಲಿ ಯಾವುದೇ ಮುಲಾಜಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Last Updated : Nov 28, 2022, 9:25 PM IST

ABOUT THE AUTHOR

...view details