ಬೆಂಗಳೂರು :ರೌಡಿಜಂ ಬಿಟ್ಟಿದ್ದೇನೆ ಎಂದು ಹೇಳಿಕೊಂಡು ಮತ್ತೆ ಫೀಲ್ಡ್ಗೆ ಇಳಿದಿದ್ದ ರೌಡಿ ಮತ್ತು ಆತನ ಗ್ಯಾಂಗ್ನ್ನು ಸಿಸಿಬಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿರುವ ಘಟನೆ ನಗರದ ವೈಯಾಲಿಕಾವಲ್ನಲ್ಲಿ ನಡೆದಿದೆ.
ಸಿಸಿಬಿ ಪೊಲೀಸರ ಕಾರ್ಯಾಚರಣೆ : ದರೋಡೆಗೆ ಸ್ಕೆಚ್ ಹಾಕಿದ್ದ ರೌಡಿ ಗ್ಯಾಂಗ್ ಅರೆಸ್ಟ್ - Rowdy Gang Arrest by ccb police
ನಗರದ ಲೋಯರ್ ಪ್ಯಾಲೇಸ್ ಅರ್ಚಡ್ ಫುಟ್ಬಾಲ್ ಗ್ರೌಂಡ್ ಬಳಿ ರಾಜೇಂದ್ರ ಅಂಡ್ ಟೀಂ ಸಿಸಿಬಿ ಬಲೆಗೆ ಬಿದ್ದಿದೆ. ಆರು ಜನರನ್ನು ಬಂಧಿಸಿ, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿರುವ ಸಿಸಿಬಿ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ..

ರೌಡಿ ಗ್ಯಾಂಗ್ ಅರೆಸ್ಟ್
ಕೆಲ ದಿನಗಳ ಹಿಂದೆ ಬರ್ತ್‌ಡೇ ಮಾಡಿಕೊಂಡು ಏರಿಯಾದಲ್ಲಿ ರೌಡಿಗಳನ್ನ ಸೇರಿಸಿದ್ದ ರಾಜೆಂದ್ರ, ಮರಳಿ ರೌಡಿಸಂನಲ್ಲಿ ಆ್ಯಕ್ಟೀವ್ ಆಗಲು ಮುಂದಾಗಿದ್ದ. ಅಲ್ಲದೆ, ಮಚ್ಚು, ಚಾಕು ಸಹಿತ ದರೋಡೆಗೆ ಸ್ಕೆಚ್ ಹಾಕಿದ್ದ. ಈ ಬಗ್ಗೆ ಮಾಹಿತಿ ತಿಳಿದ ಸಿಸಿಬಿ ಎಸಿಪಿ ಧರ್ಮೇಂದ್ರ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.
ನಗರದ ಲೋಯರ್ ಪ್ಯಾಲೇಸ್ ಅರ್ಚಡ್ ಫುಟ್ಬಾಲ್ ಗ್ರೌಂಡ್ ಬಳಿ ರಾಜೇಂದ್ರ ಅಂಡ್ ಟೀಂ ಸಿಸಿಬಿ ಬಲೆಗೆ ಬಿದ್ದಿದೆ. ಆರು ಜನರನ್ನು ಬಂಧಿಸಿ, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿರುವ ಸಿಸಿಬಿ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.