ಕರ್ನಾಟಕ

karnataka

ETV Bharat / state

ಅಣ್ಣ-ತಮ್ಮನನ್ನು ಮಸಣಕ್ಕೆ ಸೇರಿಸಿದ 17 ಆರೋಪಿಗಳು ಅಂದರ್​ - undefined

ನಗರದಲ್ಲಿ ಹತ್ಯೆಯಾಗಿದ್ದ ಸಹೋದರರ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 17 ಆರೋಪಿಗಳನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

17 ಆರೋಪಿಗಳು ಅರೆಸ್ಟ್​​

By

Published : Mar 22, 2019, 10:55 PM IST

ಬೆಂಗಳೂರು:ವಿನೋದ್​ ಮತ್ತು ರೌಡಿ ಶೀಟರ್​ ಪ್ರಶಾಂತ್​ನನ್ನ ಕೊಲೆಮಾಡಿದ್ದ 17 ಆರೋಪಿಗಳಿಗೆ ಬೆಂಗಳೂರು ಪೊಲೀಸರು ಕೈಕೋಳ ತೊಡಿಸಿದ್ದಾರೆ.

ಕಳೆದ ಫೆಬ್ರವರಿ 27ರ ರಾತ್ರಿ ಬಾಣಸವಾಡಿಯ ಕಲ್ಯಾಣ ನಗರದಲ್ಲಿ ಪ್ರಶಾಂತ್ ಎಂಬ ರೌಡಿಶೀಟರ್​ನನ್ನು ಶಿವರಾಜ್ ಮತ್ತು ಲೋಕೇಶ್ ಟೀಂ ಭೀಕರವಾಗಿ ಕೊಂದಿತ್ತು. ಮಾರತ್​ಹಳ್ಳಿ ರೌಡಿಶೀಟರ್ ಪ್ರಶಾಂತ್ ಅಣ್ಣನನ್ನು ಇದೇ ಆರೋಪಿಗಳು ನೀರಿನ ವ್ಯವಹಾರದ ವೈಷಮ್ಯ ಬೆಳೆದು ಮೂರ್ನಾಲ್ಕು ವರ್ಷಗಳ ಹಿಂದೆ ಕೊಂದಿದ್ದರು ಎನ್ನಲಾಗ್ತಿದೆ.

ಕೊಲೆ ಪ್ರಕರಣ 17 ಆರೋಪಿಗಳು ಅರೆಸ್ಟ್​​

ಅಣ್ಣ ವಿನೋದ್​ನನ್ನ ಕೊಂದಿದ್ದ ಶಿವರಾಜ್ ಮತ್ತು ಲೋಕೇಶ್ ಅವರನ್ನ ಮುಗಿಸುವುದಾಗಿ ಪ್ರಶಾಂತ್ ಪ್ರತಿಜ್ಞೆ ಮಾಡಿದ್ದ. ಈಶ್ವರಪ್ಪ ಪಿ.ಎ. ಅಪಹರಣ ಕೇಸ್​ನಲ್ಲಿ ಜೈಲಿಗೆ ಹೋಗಿ ಬಂದ ನಂತರ ಪ್ರಶಾಂತ್​ ಹವಾ ಮತ್ತಷ್ಟು ಹೆಚ್ಚಾಗಿತ್ತು. ಇವನನ್ನು ಹೀಗೆ ಬಿಟ್ಟರೆ ನಮಗೆ ಉಳಿಗಾಲವಿಲ್ಲ ಎಂದು ಶಿವರಾಜ್ ಮತ್ತು ಲೋಕೇಶ್ ಗ್ಯಾಂಗ್ ಪ್ರಶಾಂತ್​ನನ್ನು ಮುಗಿಸಿದ್ದರು.

ಇದೀಗ ಕೊಲೆ ಆರೋಪಿಗಳಾದ ಲೋಕೇಶ್, ಸ್ಟಾಲೀನ್, ಪ್ರವೀಣ್, ಬಸವರಾಜ್, ಕಿಶೋರ್ ಸೇರಿದಂತೆ ಒಟ್ಟು 17 ಜನ ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.

ಕೊಲೆಯಾದ ಎರಡು ದಿನಗಳಲ್ಲಿ ಮಾರತ್​ಹಳ್ಳಿ ಇನ್ಸ್​ಪೆಕ್ಟರ್​ ಪ್ರಮುಖ ಆರೋಪಿ ಲೋಕೇಶ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಮಾರತ್​ಹಳ್ಳಿ, ಹೆಚ್ಎಎಲ್ ಮತ್ತು ಬಾಣಸವಾಡಿ ಪೊಲೀಸರು ಒಟ್ಟು 17 ಜನ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಆದರೆ ಪ್ರಮುಖ ಆರೋಪಿ ಶಿವರಾಜ್ ತಲೆಮರೆಸಿಕೊಂಡಿದ್ದು, ಅವನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

For All Latest Updates

TAGGED:

ABOUT THE AUTHOR

...view details