ಬೆಂಗಳೂರು: ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕೆ.ಜಿ ಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್‌ವೊಬ್ಬನನ್ನು ಬರ್ಬರವಾಗಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.
ಬೆಂಗಳೂರಲ್ಲಿ ರೌಡಿಶೀಟರ್ ಬರ್ಬರ ಹತ್ಯೆ: ಕೃತ್ಯದ ದೃಶ್ಯ ಸಿಸಿಟಿವಿಯಲ್ಲಿ ಸೆರೆ - bengaluru latest crime news
ಕಳೆದ ಬುಧವಾರ ಡಿ.ಜೆ ಹಳ್ಳಿ ಠಾಣಾ ವ್ಯಾಪ್ತಿಯ ಮೋದಿ ರಸ್ತೆಯಲ್ಲಿ ಕೊಲೆಯಾದ ರೌಡಿಶೀಟರ್ ಸುಹೈಲ್ ಆಲಿಯಾಸ್ ಲಂಗ್ಡಾ ಹತ್ಯೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ರೌಡಿಶೀಟರ್ ಬರ್ಬರ ಹತ್ಯೆ ದೃಶ್ಯ
ಸುಹೈಲ್ ಆಲಿಯಾಸ್ ಲಂಗ್ಡಾ ಕೊಲೆಯಾದವನು. ಈತ ರೌಡಿಶೀಟರ್ ತನ್ವೀರ್‌ನೊಂದಿಗೆ ಗುರುತಿಸಿಕೊಂಡಿದ್ದು, ಇತ್ತೀಚೆಗೆ ವಿರೋಧಿ ಗುಂಪಿನೊಂದಿಗೆ ಜಗಳವಾಡಿಕೊಂಡಿದ್ದನಂತೆ. ಈ ಕಾರಣಕ್ಕೆ ದುಷ್ಕರ್ಮಿಗಳು ಈತನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಕಳೆದ ಬುಧವಾರ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಮೋದಿ ರಸ್ತೆಯಲ್ಲಿ ಒಂಟಿಯಾಗಿ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ದುಷ್ಕರ್ಮಿಗಳು ಬಲವಾದ ಆಯುಧ ಹಾಗೂ ಕಲ್ಲಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ಹರಿದ ನೆತ್ತರು: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿ ಶೀಟರ್ ಬರ್ಬರ ಹತ್ಯೆ
Last Updated : Apr 9, 2021, 7:47 PM IST