ಬೆಂಗಳೂರು:ರೌಡಿ ಶೀಟರ್ ಒಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಹೆಸರಘಟ್ಟ ಬಳಿಯ ಮಕ್ತೂರಿನಲ್ಲಿ ನಡೆದಿದೆ.
ಇವರಿಗಿಲ್ವಾ ಲಾಕ್ಡೌನ್ ಭಯ... ರಾಜಧಾನಿಯಲ್ಲಿ ರೌಡಿ ಶೀಟರ್ ಬರ್ಬರ ಹತ್ಯೆ - ರಾಜಧಾನಿಯಲ್ಲಿ ರೌಡಿ ಶೀಟರ್ ಬರ್ಬರ ಹತ್ಯೆ
ಲಾಕ್ ಡೌನ್ ನಡುವೆಯು ರಾಜಧಾನಿಯಲ್ಲಿ ರೌಡಿಗಳ ಕಾಳಗ ಮುಂದುವರೆದಿದ್ದು, ನಗರದ ಹೆಸರಘಟ್ಟ ಬಳಿಯ ಮಕ್ತೂರಿನಲ್ಲಿ ರೌಡಿ ಶೀಟರ್ ಒಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
![ಇವರಿಗಿಲ್ವಾ ಲಾಕ್ಡೌನ್ ಭಯ... ರಾಜಧಾನಿಯಲ್ಲಿ ರೌಡಿ ಶೀಟರ್ ಬರ್ಬರ ಹತ್ಯೆ Rowdy Sheeter Murder in Bengaluru](https://etvbharatimages.akamaized.net/etvbharat/prod-images/768-512-6889011-971-6889011-1587519399362.jpg)
ರೌಡಿ ಶೀಟರ್ ಬರ್ಬರ ಹತ್ಯೆ
ಪ್ರಕಾಶ್ ಅಲಿಯಾಸ್ ಲೂಸ್ ಕೊಲೆಯಾದ ವ್ಯಕ್ತಿ. ಈತ ರಾಜಾನುಕುಂಟೆ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದ. ಚಾಕುವಿನಿಂದ ಇರಿದು ಪ್ರಕಾಶ್ನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೇರೆ ಕಡೆ ಕೊಲೆ ಮಾಡಿ ಮಕ್ತೂರಿನಲ್ಲಿ ಶವ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.
ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.