ಕರ್ನಾಟಕ

karnataka

ETV Bharat / state

ಸಿಲಿಕಾನ್​ ಸಿಟಿಯಲ್ಲಿ ರೌಡಿ ಶೀಟರ್​ ಬರ್ಬರ ಹತ್ಯೆ - rowdy Sheeter Murder BTM layout in Bengaluru

ನಗರದ ಬಿಟಿಎಂ ಲೇಔಟ್​ನಲ್ಲಿ ಅಪರಿಚಿತ ವ್ಯಕ್ತಿಗಳು ಗುರುತು ಪತ್ತೆಯಾಗದ ರೀತಿ ರೌಡಿ ಶೀಟರ್​ ಒಬ್ಬನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ‌ಮಾಡಿ ಎಸ್ಕೇಪ್ ಆಗಿರುವ ಘಟನೆ ನಡೆದಿದೆ.

ರೌಡಿ ಶೀಟರ್​ ಬರ್ಬರ ಹತ್ಯೆ
ರೌಡಿ ಶೀಟರ್​ ಬರ್ಬರ ಹತ್ಯೆ

By

Published : Feb 16, 2020, 3:34 PM IST

ಬೆಂಗಳೂರು: ನಗರದ ಕೆ.ಜಿ.ಹಳ್ಳಿ ಬಳಿ ರೌಡಿಶೀಟರ್ ಓರ್ವ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಪ್ಲೈವುಡ್ ತಬರೇಜ್ ಹತ್ಯೆಯಾದ ರೌಡಿ ಶೀಟರ್. ವಿವಿಧ ಪ್ರಕರಣದಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಈತ, ಕಳೆದ 10 ದಿನಗಳ ಹಿಂದೆಷ್ಟೆ ಬಿಡುಗಡೆಯಾಗಿದ್ದ. ‌ಕಳೆದ ರಾತ್ರಿ ಬಿಟಿಎಂ ಲೇಔಟ್​ನಲ್ಲಿ ಅಪರಿಚಿ ತ ವ್ಯಕ್ತಿಗಳು ಗುರುತು ಪತ್ತೆಯಾಗದ ರೀತಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ‌ಮಾಡಿ ಎಸ್ಕೇಪ್ ಆಗಿದ್ದಾರೆ.

ಕೊಲೆಯಾದ ಪ್ಲೈವುಡ್ ತಬರೇಜ್ ಹಾಗೂ ರೌಡಿ ಶೀಟರ್​ ಚಪ್ಪಡಿ ನದಿಂ ನಡುವೆ ಹಳೇ ದ್ವೇಷ ಇತ್ತು ಎನ್ನಲಾಗಿದ್ದು, ಈ ಕಾರಣದಿಂದ ಚಪ್ಪಡಿ ಹುಡುಗರೇ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಈಗಾಗಲೇ ವಿಶೇಷ ತಂಡ ರಚನೆ ಮಾಡಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಕೊಲೆಯಾದ ತಬರೇಜ್ ವಿರುದ್ಧ ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಕಳ್ಳತನ, ಡಕಾಯಿತಿ ಪ್ರಕರಣಗಳಿರುವ ಬಗ್ಗೆ ತಿಳಿದು ಬಂದಿದೆ.

ABOUT THE AUTHOR

...view details