ಕರ್ನಾಟಕ

karnataka

ETV Bharat / state

ಮಾರಕಾಸ್ತ್ರದಿಂದ ಕೊಚ್ಚಿ ರೌಡಿ ಶೀಟರ್​ ಬರ್ಬರ ಹತ್ಯೆ: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಬೆಂಗಳೂರಿನಲ್ಲಿ ರೌಡಿ ಶೀಟರ್​ ಬರ್ಬರ ಹತ್ಯೆ

ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಡಿ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಂಗಳೂರಿನಲ್ಲಿ ರೌಡಿ ಶೀಟರ್​ ಬರ್ಬರ ಹತ್ಯೆ Rowdy sheeter  murder in Bangalore
ಸಿಸಿಟಿವಿ ದೃಶ್ಯ

By

Published : Mar 1, 2020, 12:37 PM IST

ಬೆಂಗಳೂರು: ನಗರದಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಡಿ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಭಟ್ಟಿ ಅಮ್ಜಾದ್ ಎಂಬುವವರನ್ನು ಅಪರಿಚಿತರು ನಿನ್ನೆ ಸಂಜೆ ಏಳು ಗಂಟೆ ವೇಳೆಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.‌

ರೌಡಿ ಶೀಟರ್​ ಕೊಲೆಯ ಸಿಸಿಟಿವಿ ದೃಶ್ಯ

ಘಟನೆ ಸಂಬಂಧ ನಗರ ಪೂರ್ವ ವಿಭಾಗದ ಡಿಸಿಪಿ‌‌ ಶರಣಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿ.ಜಿ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯ ಆಧಾರಿಸಿ ತನಿಖೆ ‌ಮುಂದುವರೆಸಿದ್ದಾರೆ.

ತನಿಖೆ ವೇಳೆ ಭಟ್ಟಿ ಅಮ್ಜಾದ್ ಡಿ.ಜೆ.ಹಳ್ಳಿ ವ್ಯಾಪ್ತಿಯ ರೌಡಿಯಾಗಿದ್ದು ಹಳೆ ದ್ವೇಷದ ಹಿನ್ನೆಲೆ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಕೊಲೆಯಾದ ಭಟ್ಟಿ ಅಮ್ಜಾದ್ ಕೂಡ ಡಿ.ಜೆ.ಹಳ್ಳಿ ಪೊಲೀಸರಿಗೆ ಬೇಕಾಗಿದ್ದ ಪ್ರಮುಖ ಆರೋಪಿಯಾಗಿದ್ದು, ತನಿಖೆಗೆ ಸಹಕರಿಸದೆ ತಲೆಮರೆಸಿಕೊಂಡಿದ್ದ. ಈತನ ಮೇಲೆ ಕೊಲೆ, ಕೊಲೆಯತ್ನ, ಸುಲಿಗೆ ಪ್ರಕರಣಗಳಿವೆ ಎಂದು ತಿಳಿದುಬಂದಿದೆ.

ABOUT THE AUTHOR

...view details