ಕರ್ನಾಟಕ

karnataka

ETV Bharat / state

ಪಿಸ್ತೂಲ್ ಹಿಡಿದು ಕೊಲೆಗೆ ಸಂಚು: ಬೆಂಗಳೂರಿನಲ್ಲಿ ರೌಡಿ ಶೀಟರ್ ಅಂದರ್ - ಬೆಂಗಳೂರು ರೌಡಿಶೀಟರ್ ಅರೆಸ್ಟ್

ಪುಲಿಕೇಶಿನಗರದ ರೌಡಿಶೀಟರ್ ಸೈಯದ್ ಸುಭಾನ್​ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

rowdy sheeter arrested in Bangalore
ರೌಡಿ ಶೀಟರ್ ಸೈಯದ್ ಸುಭಾನ್ ಅರೆಸ್ಟ್

By

Published : Jun 11, 2022, 5:30 PM IST

ಬೆಂಗಳೂರು: ಪಿಸ್ತೂಲ್ ಹಿಡಿದು ಕೊಲೆ ಮಾಡಲು ಸಂಚು ರೂಪಿಸುತ್ತಿದ್ದ ರೌಡಿಶೀಟರ್​ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪುಲಿಕೇಶಿನಗರದ ರೌಡಿಶೀಟರ್ ಸೈಯದ್ ಸುಭಾನ್(27) ಬಂಧಿತ ಆರೋಪಿ. ಈ ಹಿಂದೆ ರೌಡಿಶೀಟರ್ ಸೈಯದ್ ಸುಭಾನ್ ವಿರುದ್ಧ ಕೊಲೆ, ಕೊಲೆ ಯತ್ನ, ದರೋಡೆ ಪ್ರಕರಣಗಳು ದಾಖಲಾಗಿದ್ದವು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಜಧಾನಿಯ ಆದರ್ಶ ನಗರದ ರಾಘವೇಂದ್ರ ಸ್ಟೋರ್ಸ್ ಬಳಿ ಕೊಲೆಗೆ ಹೊಂಚು ಹಾಕಿದ್ದ ರೌಡಿ ಸೈಯದ್ ಸುಭಾನ್ ಕುರಿತು ಖಚಿತ ಮಾಹಿತಿ ಪಡೆದ ಸಿಸಿಬಿಯ ಸಂಘಟಿತ ಅಪರಾಧ ವಿಭಾಗ ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ. 4 ಪ್ರಕರಣಗಳಲ್ಲಿ ವಾರೆಂಟ್ ಹೊರಡಿಸಿದ್ದರೂ ತಲೆಮರೆಸಿಕೊಂಡು ಓಡಾಡಿಕೊಂಡಿದ್ದ ಸೈಯದ್ ಸುಭಾನ್ ನಾಡಪಿಸ್ತೂಲ್ ಇಟ್ಟುಕೊಂಡು ಮತ್ತೊಂದು ಕೊಲೆಗೆ ಸಂಚು ಹೂಡಿದ್ದ ಎನ್ನಲಾಗ್ತಿದೆ.

ಸದ್ಯ ಆರೋಪಿಯನ್ನು ಬಂಧಿಸಿ 1 ನಾಡ ಪಿಸ್ತೂಲ್​ ಹಾಗೂ 5 ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ. ಡಿ ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ದಾವಣಗೆರೆಯಲ್ಲಿ ನಾಳೆ ನಡೆಯಬೇಕಿದ್ದ ಎಸ್​​ಡಿಪಿಐ ಸಮಾವೇಶ ರದ್ದು: 144 ಸೆಕ್ಷನ್ ಜಾರಿ

ABOUT THE AUTHOR

...view details