ಬೆಂಗಳೂರು: ರೌಡಿಗಳು ಜೈಲಿನಿಂದ ಹೊರಗೆ ಬಂದ ಮೇಲೆ ಬುದ್ಧಿ ಕಲಿಯೋದೆ ಇಲ್ಲ. ಮತ್ತದೇ ಚಾಳಿಗೆ ಬಿದ್ದು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಖಾಕಿ ಬಲೆಗೆ ಬೀಳುತ್ತಾರೆ. ಇದೇ ಸಾಲಿಗೆ ಸೇರಿದ ರೌಡಿ ಶೀಟರ್ ಪಪ್ಪು ಅಲಿಯಾಸ್ ಅಮೀರ್ ಖಾನ್ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ವೇಳೆ ಶಿವಾಜಿನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಜೈಲಿನಿಂದ ಹೊರ ಬಂದು ಮತ್ತೆ ಅಕ್ರಮ ಚಟುವಟಿಕೆ : ಖಾಕಿ ಬಲೆಗೆ ಬಿದ್ದ ರೌಡಿಶೀಟರ್ - shivajinagar police arrested rowdy sheeter
ಜೈಲಿನಿಂದ ಬಿಡುಗಡೆಯಾದ ಬಳಿಕ ಮತ್ತೆ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ರೌಡಿಶೀಟರ್ ಪಪ್ಪು ಅಲಿಯಾಸ್ ಅಮೀರ್ ಖಾನ್ ಮತ್ತೆ ಶಿವಾಜಿನಗರ ಪೊಲೀಸರ ಅತಿಥಿಯಾಗಿದ್ದಾನೆ..
rowdy
ಅಮೀರ್ ಖಾನ್ ಶಿವಾಜಿನಗರ ರೌಡಿಶೀಟರ್ ದಿ.ಕೋಳಿ ಫಯಾಜ್ ಮಗ. ಇತ್ತೀಚೆಗಷ್ಟೆ ಆರೋಪಿ ಪಪ್ಪು ಅಲಿಯಾಸ್ ಅಮೀರ್ ಖಾನ್ ಜೈಲಿನಿಂದ ಬಿಡುಗಡೆಯಾಗಿದ್ದ. ಜೈಲಿನಿಂದ ಹೊರ ಬಂದ ಬಳಿಕ ಮತ್ತದೇ ಹಳೇ ಚಾಳಿ ಮುಂದುವರೆಸಿದ್ದ. ಹೀಗಾಗಿ, ಅಕ್ರಮ ಚಟುವಟಿಕೆಗಳಲ್ಲಿ ಮತ್ತೆ ತೊಡಗಿಸಿಕೊಂಡಿದ್ದ ಕಾರಣ ಇದೀಗ ಮತ್ತೆ ಜೈಲು ಪಾಲಾಗಿದ್ದಾನೆ.
ಇದನ್ನೂ ಓದಿ :ಗಂಡನ ಮನೆಯಲ್ಲಿ ಮಹಿಳೆ ಆತ್ಮಹತ್ಯೆ.. ಇದೊಂದು ಕೊಲೆ ಎಂದ ಕುಟುಂಬಸ್ಥರು