ಬೆಂಗಳೂರು:ಕಾಂಗ್ರೆಸ್ ನಾಯಕರಿಜ್ವಾನ್ ಅರ್ಷದ್ ಗೆ ಟಿಕೆಟ್ ನೀಡುವಂತೆ ಅವರ ಪರವಾಗಿ ಮಾತನಾಡಲು ರೌಡಿಶೀಟರ್ ಇಶ್ತಿಯಾಕ್ ಅಹಮ್ಮದ್ ಮತ್ತು ಬೆಂಬಲಿಗರು ಕೆಪಿಸಿಸಿ ಕಚೇರಿಗೆ ಆಗಮಿಸಿದ್ದರು.
ಕಳೆದ ಬಾರಿ ಕೆ.ಸಿ.ವೇಣುಗೋಪಾಲ್ ಆಗಮಿಸಿದ್ದಾಗ ರಿಜ್ವಾನ್ ಪರ ಇಶ್ತಿಯಾಕ್ ಬಂದಿದ್ದ. ಇಂದು ಮತ್ತೆ ಕೆಪಿಸಿಸಿ ಕಚೇರಿಗೆ ಆಗಮಿಸಿದ ಇಶ್ತಿಯಾಕ್ ಮತ್ತು ಸಹಚರರು ರಿಜ್ವಾನ್ ಅರ್ಷದ್ ಪರ ಬ್ಯಾಟಿಂಗ್ ಮಾಡಿತು. ಇಶ್ತಿಯಾಕ್ ಐಎಂಎ ಹಗರಣದ ಪ್ರಕರಣದ ಪ್ರಮುಖ ಆರೋಪಿ.
ದಿನೇಶ್ ಗುಂಡೂರಾವ್ ರನ್ನು ಭೇಟಿಯಾಗಿ ಬಳಿಕ ಮಾತನಾಡಿದ ಮಾಜಿ ಪಾಲಿಕೆ ಸದಸ್ಯ ಚಂದ್ರು, ಶಿವಾಜಿನಗರದಿಂದ ರಿಜ್ವಾನ್ ಅರ್ಷದ್ ಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇವೆ. ಸ್ಥಳೀಯರಿಗೇ ಟಿಕೆಟ್ ನೀಡಬೇಕು. ರಿಜ್ವಾನ್ ಅರ್ಷದ್ ಸ್ಥಳೀಯರಾಗಿದ್ದು, ಅವರಿಗೇ ಟಿಕೆಟ್ ನೀಡಬೇಕು ಎಂದು ಒತ್ತಾಯ ಮಾಡಿದ್ದೇವೆ ಎಂದು ತಿಳಿಸಿದರು.
ಕೆಪಿಸಿಸಿ ಕಚೇರಿಗೆ ಆಗಮಿಸಿದ ರೌಡಿಶೀಟರ್ ಇಶ್ತಿಯಾಕ್ ಐದು ಕ್ಷೇತ್ರಗಳ ಉಪಚುನಾವಣೆ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಪೂರ್ವಸಿದ್ಧತಾ ಸಭೆ ನಡೆಯುತ್ತಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಹಿರಿಯ ನಾಯಕರದ ಎಚ್.ಕೆ.ಪಾಟೀಲ್, ಕೆ.ಜೆ.ಜಾರ್ಜ್, ಈಶ್ವರ್ ಖಂಡ್ರೆ, ಶಾಸಕರಾದ ಸೌಮ್ಯ ರೆಡ್ಡಿ, ಅಖಂಡ ಶ್ರೀನಿವಾಸ ಮೂರ್ತಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.