ಬೆಂಗಳೂರು: ಪರಸ್ಪರ ರಾಜಿ ಮಾಡಿಕೊಳ್ಳುವಾಗ ಗಲಾಟೆ ನಡೆದು ಜೋಡಿ ಕೊಲೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ.
ಪೊಲೀಸರಿಂದ ಸಿನಿಮೀಯ ರೀತಿ ಕಾರ್ಯಾಚರಣೆ ಸಂಜಯ್ ಅಲಿಯಾಸ್ ಚಿಕ್ಕಪ್ಪಿ ಕಾಲಿಗೆ ಗುಂಡು ತಿಂದ ಆರೋಪಿ. ಕಳೆದ ಭಾನುವಾರ ರಾತ್ರಿ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಕುಂದ ಅಲಿಯಾಸ್ ಕರಿಹಂದಿ, ಬೈರಸಂದ್ರ ಮನೋಜ್ ಕೊಲೆಯಾಗಿತ್ತು. ಹೀಗಾಗಿ ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ತಂಡ ರಚನೆ ಮಾಡಿದ್ದು ಸದ್ಯ ನಿನ್ನೆ ನಾಲ್ವರನ್ನು ಬಂಧಿಸಿಲಾಗಿತ್ತು.
ಅವರು ನೀಡಿದ ಮಾಹಿತಿ ಮೇರೆಗೆ ಪ್ರಮುಖ ಆರೋಪಿ ಇಸ್ರೋ ಲೇಔಟ್ ನ ದೇವರ ಕೆರೆ ಬಳಿ ಇದ್ದ ಹಿನ್ನಲೆ ಸುಬ್ರಮಣ್ಯ ಪುರ ಠಾಣೆ ಸಬ್ ಇನ್ಸ್ಪೆಕ್ಟರ್ ಮಧು ಹಾಗೂ ಕೋಣನಕುಂಟೆ ಇನ್ಸ್ಪೆಕ್ಟರ್ ಧರ್ಮೇಂದ್ರ ಆರೋಪಿ ಹಿಡಿಯಲು ತೆರಳಿದ್ದಾರೆ. ಈ ವೇಳೆ ಸಬ್ ಇನ್ಸ್ಪೆಕ್ಟರ್ ಗೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ. ಆರೋಪಿಗೆ ತಕ್ಷಣ ಶರಣಾಗುವಂತೆ ಸೂಚಿಸಿದರೂ ಮತ್ತೆ ಹಲ್ಲೆಮಾಡಲು ಮುಂದಾದಗ ಆರೋಪಿ ಕಾಲಿಗೆ ಇನ್ಸ್ಪೆಕ್ಟರ್ ಗುಂಡು ಹೊಡೆದಿದ್ದಾರೆ.
ಸದ್ಯ ಸಬ್ ಇನ್ಸ್ಪೆಕ್ಟರ್ ಮಧು ಹಾಗೂ ಆರೋಪಿ ಸಂಜಯ್ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಆರೋಪಿ ಹನುಮಂತನಗರ ನಿವಾಸಿಯಾಗಿದ್ದು ನಗರದಲ್ಲಿ ಹಲವಾರು ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.
ಘಟನೆ ಹಿನ್ನಲೆ : ಸುಬ್ರಮಣ್ಯಪುರದ, ಹನುಮಂತನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಮುಕುಂದ ಮತ್ತು ಕೊಲೆಯಾದ ಮನೋಜ ಪ್ರಮುಖ ಆರೋಪಿ ಸಂಜಯ್ ಜೊತೆ ರಾಜಿ ಸಂಧಾನಕ್ಕೆ ಕರೆಸಿದ್ದ. ಆದರೆ ರಾಜಿಗೆ ಕರೆದ ಸಮಯದಲ್ಲಿ ಎರಡು ತಂಡಗಳು ಮಾರಕಾಸ್ತ್ರಗಳಿಂದ ಹೊಡೆದಾಕೊಂಡಿದ್ದು ಈ ಜಗಳದಲ್ಲಿ ಡಬಲ್ ಮರ್ಡರ್ ಮಾಡಿ ಸಂಜಯ್ ತಂಡ ಎಸ್ಕೇಪ್ ಆಗಿತ್ತು.