ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ರೌಡಿ ಶೀಟರ್​ ಬರ್ಬರ ಹತ್ಯೆ: ಹಳೇ ವೈಷಮ್ಯ ಶಂಕೆ - ಕಿಮ್ಸ್ ಆಸ್ಪತ್ರೆ

ಸಿಲಿಕಾನ್​ ಸಿಟಿಯಲ್ಲಿ ರೌಡಿ ಶೀಟರ್​​ ಇಸ್ಲಾಂ ಖಾನ್​ನನ್ನು​ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ರೌಡಿ ಶೀಟರ್​​ ಇಸ್ಲಾಂ ಖಾನ್​
ರೌಡಿ ಶೀಟರ್​​ ಇಸ್ಲಾಂ ಖಾನ್​

By

Published : Aug 9, 2020, 10:18 AM IST

ಬೆಂಗಳೂರು: ನಗರದಲ್ಲಿ ಮತ್ತೆ ರೌಡಿಗಳ ಅಟ್ಟಹಾಸ ಮುಂದುವರೆದಿದೆ. ನಿನ್ನೆ ರಾತ್ರಿ ರೌಡಿಶೀಟರ್​ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ.

ಇಸ್ಲಾಂ ಖಾನ್ ಮೃತ ರೌಡಿ ಶೀಟರ್​. ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ‌ ನಿವಾಸಿಯಾಗಿದ್ದ ಖಾನ್ ನಿನ್ನೆ ರಾತ್ರಿ ಶಾಮಣ್ಣ ಗಾರ್ಡನ್ ಬಳಿಯ ಈರಾ ಮಸೀದಿ ಬಳಿ ಇರುವಾಗ ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿದೆ. ಗಂಭೀರವಾಗಿ ಗಾಯಗೊಂಡ ಆತನನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಇಸ್ಲಾಂ ಖಾನ್​ ಸಾವನ್ನಪ್ಪಿದ್ದಾನೆ.

ಇಸ್ಲಾಂ ಖಾನ್​ ಪಶ್ಚಿಮ ವಿಭಾಗ ಠಾಣಾ ವ್ಯಾಪ್ತಿಯ ರೌಡಿಶೀಟರ್. ಈತನ ವಿರುದ್ಧ 2016ರಲ್ಲಿ ಬ್ಯಾಟರಾಯನಪುರದ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ಐಪಿಸಿ 307, 2018ರಲ್ಲಿ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ಐಪಿಸಿ 302ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ‌ ಜಾಮೀನು ಪಡೆದು‌ ಜೈಲಿನಿಂದ ಹೊರಬಂದು ಯಾವುದೇ ಕ್ರೈಂ ಚಟುವಟಿಕೆಯಲ್ಲಿ ತೊಡಗದೆ, ಸಣ್ಣಪುಟ್ಟ ಉದ್ಯಮ ನಡೆಸುತ್ತಿದ್ದ.

ಆದರೆ ಈ ಹಿಂದೆ ರೌಡಿಯಾಗಿದ್ದ ಕಾರಣ ಹಳೇ ದ್ವೇಷದ ಹಿನ್ನೆಲೆಯಲ್ಲಿ ಈತನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಮೃತನ ಅಣ್ಣ ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದು, ಪಶ್ಚಿಮ ವಿಭಾಗ ಡಿಸಿಪಿ‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details