ಕರ್ನಾಟಕ

karnataka

ETV Bharat / state

ಡ್ರಗ್ಸ್​ ವಿರುದ್ಧ ಪೊಲೀಸರ ಸಮರ.. ಎನ್​​​​ಡಿಪಿಎಸ್​ ಕಾಯ್ದೆಯಡಿ ರೌಡಿ ಬಂಧನ

ಬೆಂಗಳೂರಲ್ಲಿ ಡ್ರಗ್ಸ್ ವಿರುದ್ಧ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಈಗಾಗಲೇ ಹಲವು ಪೆಡ್ಲರ್​ಗಳು ಸೇರಿದಂತೆ ಡ್ರಗ್ಸ್ ಮಾರಾಟ ಜಾಲದಲ್ಲಿ ತೊಡಗಿದ್ದ ಹಲವರನ್ನು ಬಂಧಿಸಿದ್ದಾರೆ. ಇದೀಗ ಡ್ರಗ್ಸ್ ಮಾರಾಟ ಕೇಸ್​​​ನಲ್ಲಿ ಸೈಯದ್​ನನ್ನು ಎನ್​​​ಡಿಪಿಎಸ್​​ ಕಾಯ್ದೆಯಡಿ ಬಂಧಿಸಲಾಗಿದೆ.

CCB Police office bangalore
ಸಿಸಿಬಿ ಪೊಲೀಸ್ ಕಚೇರಿ ಬೆಂಗಳೂರು

By

Published : Oct 6, 2020, 1:47 PM IST

ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿರುವವರ ವಿರುದ್ಧ ಸಿಸಿಬಿ ಸಮರ ಸಾರಿದೆ. ಸದ್ಯ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ರೌಡಿಯನ್ನು ಎನ್​​ಡಿಪಿಎಸ್ ಕಾಯ್ದೆ 1988 ಅಡಿಯಲ್ಲಿ ಬಂಧಿಸಲಾಗಿದೆ. ಸೈಯದ್ ನಾಜೀಮ್ ಅಲಿಯಾಸ್ ಬೈಲ್ ನವಾಬ್ ಬಂಧಿತ ಆರೋಪಿಯಾಗಿದ್ದಾನೆ.

ಸಿಲಿಕಾನ್ ಸಿಟಿಯನ್ನು ಮಾದಕ ವಸ್ತುಗಳಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಪೊಲೀಸರು ಪಣ ತೊಟ್ಟಿದ್ದಾರೆ. ಈ ವೇಳೆ ಗಾಂಜಾ ಮಾರಾಟ, ಸಂಗ್ರಹ, ಸಾಗಣಿಕೆ ಜಾಲದಲ್ಲಿ ಪದೇ ಪದೇ 2009 ರಿಂದ ಭಾಗಿಯಾಗಿ 6 ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಮೇಲೆ ಹೊರಬಂದು ನಂತರ ಮತ್ತೆ ಗಾಂಜಾ ಮಾರಾಟದಲ್ಲಿ ಭಾಗಿಯಾಗಿದ್ದ ಸೈಯದ್​​​ನನ್ನು ಬಂಧಿಸಲಾಗಿದೆ. ನಗರ ಪೊಲೀಸ್​ ಆಯುಕ್ತ ಕಮಲ್ ಪಂಥ್ ಅನುಮತಿ ಪಡೆದು ಈ ಕಾಯ್ದೆಯಡಿ ರೌಡಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

ಈ ಕಾಯ್ದೆಯಡಿ ಈ ಹಿಂದೆ ನೈಜೀರಿಯಾ ಪ್ರಜೆವೋರ್ವನನ್ನು ಬಂಧಿಸಲಾಗಿತ್ತು. ಇದೀಗ ಸೈಯದ್ ನಾಜೀಮ್​​​ನನ್ನು ಬಂಧಿಸಲಾಗಿದ್ದು, ಇದು 2ನೇ ಪ್ರಕರಣವಾಗಿದೆ.

ABOUT THE AUTHOR

...view details