ಬೆಂಗಳೂರು: ನಗರದಲ್ಲಿ ಪುಡಿರೌಡಿಗಳ ಅಟ್ಟಹಾಸ ಮತ್ತೆ ಮುಂದುವರೆದಿದೆ. ಬೇಕರಿ ಮಾಲೀಕನ ಮೇಲೆ ಪುಡಿ ರೌಡಿಗಳು ದಾಳಿ ಮಾಡಿರುವ ಘಟನೆ ತ್ಯಾಗರಾಜನಗರದ ಕೋಳಿಮನೆ ಹೋಟೆಲ್ ಮುಂದೆ ನಡೆದಿದೆ.
ಮುಖ ನೋಡಿದ್ದಕ್ಕೆ ನಾಲ್ಕು ಬೆರಳು ಕಟ್: ಬೆಂಗಳೂರಲ್ಲಿ ಪುಡಿ ರೌಡಿಗಳ ಅಟ್ಟಹಾಸ - rowdy attack
ಬೆಂಗಳೂರಲ್ಲಿ ಪುಡಿ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. ಬೇಕರಿ ಮಾಲೀಕನೋರ್ವ ಪುಡಿ ರೌಡಿಗಳ ಮುಖವನ್ನು ನೋಡಿದ್ದಕ್ಕೆ ರೌಡಿಗಳು ಅವನ ಮೇಲೆ ಹಲ್ಲೆ ನಡೆಸಿ, ಬಲಗೈನ ನಾಲ್ಕು ಬೆರಳುಗಳನ್ನು ಕತ್ತರಿಸಿದ್ದಾರೆ.
ಕಳೆದ 22 ರಂದು ಕೋಳಿಮನೆಗೆ ಗಿರೀಶ್ ತನ್ನ ಗೆಳೆಯ ಕಾರ್ತಿಕ್ ಜೊತೆ ಊಟ ಮಾಡಲು ಹೋಟೆಲ್ ಗೆ ಬಂದಿದ್ರು. ಊಟ ಮುಗಿಸಿ ಹೋಟೆಲ್ ಹೊರಗೆ ಗೆಳೆಯನ ಜೊತೆ ಮಾತನಾಡುತ್ತ ನಿಂತಿದ್ದಾಗ ಈ ವೇಳೆ ಬೈಕ್ನಲ್ಲಿ ಮೂವರು ಪುಡಿರೌಡಿಗಳು ಮೂವರು ಬಂದಿದ್ದರು. ಈ ವೇಳೆ ಗಿರೀಶ್ ಪುಡಿ ರೌಡಿಗಳ ಮುಖ ನೋಡಿದ್ದಾರೆ. ಇದರಿಂದ ರೌಡಿಗಳು ಏನ್ರೋ, ಇಲ್ಲೇನ್ ಮಾಡ್ತಿದ್ದೀರಾ..? ನಮ್ಮನ್ನೇ ನೋಡೋವಷ್ಟು ಧೈರ್ಯನಾ ಎಂದು ಬೇಕರಿ ಮಾಲೀಕ ಗಿರೀಶ್ ಹಾಗೂ ಆತನ ಗೆಳೆಯ ಕಾರ್ತಿಕ್ ಮೇಲೆ ಲಾಂಗ್ ನಿಂದ ಹಲ್ಲೆ ಮಾಡಿದ್ದಾರೆ.
ಮಚ್ಚಿನೇಟಿಗೆ ಗಿರೀಶ್ ಬಲಗೈನ ನಾಲ್ಕು ಬೆರಳುಗಳು ತುಂಡಾಗಿದ್ದು ತಕ್ಷಣ ಗಾಯಾಳು ಗಿರೀಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹಾಗೆ ಗಾಯಾಳು ಗಿರೀಶ್ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಬನಶಂಕರಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.