ಕರ್ನಾಟಕ

karnataka

ETV Bharat / state

ಕುಣಿಗಲ್ ಗಿರಿ ಬಂಧಿಸಲು ಪಬ್​ಗಳ ಮೇಲೆ ದಾಳಿ.. ಬಿಲ್ಡಿಂಗ್​ ಹಾರಿ ತಪ್ಪಿಸಿಕೊಂಡ ರೌಡಿಶೀಟರ್​ - undefined

ದಾಳಿ ವೇಳೆ ಕುಣಿಗಲ್ ಗಿರಿ ಕಾರು ಸೇರಿದಂತೆ, ಒಟ್ಟು‌ 5 ಲಕ್ಷ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕುಣಿಗಲ್ ಗಿರಿ

By

Published : Jun 15, 2019, 2:01 PM IST

ಬೆಂಗಳೂರು : ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡು ಹುಟ್ಟುಹಬ್ಬದ ಪ್ರಯುಕ್ತ ಪಬ್ ವೊಂದರಲ್ಲಿ ಭರ್ಜರಿಯಾಗಿ ಬರ್ತ್​ಡೇ ಆಚರಿಸಲು ಮುಂದಾಗಿದ್ದ ರೌಡಿಶೀಟರ್ ಕುಣಿಗಲ್ ಗಿರಿಯನ್ನು ಗುರಿಯಾಗಿಸಿಕೊಂಡ ಸಿಸಿಬಿ ಪೊಲೀಸರು ಪಬ್ ಮೇಲೆ ದಾಳಿ ನಡೆಸಿದ್ದಾರೆ.

ನಿನ್ನೆ ತಡರಾತ್ರಿ ರೆಸಿಡೆನ್ಸಿ ರಸ್ತೆಯಲ್ಲಿರುವ ಪಬ್, ಲೈವ್ ಬ್ಯಾಂಡ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ 200ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬರ್ತ್​ಡೇ ಹಿನ್ನೆಲೆಯಲ್ಲಿ ಕುಣಿಗಲ್​ ಗಿರಿ ಹಾಗೂ ಸಹಚರರು ಸೇರಿ ಸುಮಾರು 250 ಮಹಿಳಾ ಡ್ಯಾನ್ಸರ್​ಗಳ ಸಮ್ಮುಖದಲ್ಲಿ ಬರ್ತ್​ಡೇ ಅರೇಂಜ್ ಆಗಿತ್ತು. ಸಂಭ್ರಮಕ್ಕಾಗಿಯೇ ಟೈಮ್ಸ್ ಬಿಲ್ಡಿಂಗ್​ನಲ್ಲಿರುವ ಪಬ್ ಮತ್ತು ಲೈವ್ ಬ್ಯಾಂಡ್​ಗಳಲ್ಲಿ ವೇದಿಕೆ ಸಿದ್ಧಪಡಿಸಿತ್ತು.

ಆಡಂಬರದ ಬರ್ತಡೇ ಸಂಭ್ರಮಾಚರಣೆಯ ವಿಚಾರ ತಿಳಿದು, ಡಿಸಿಪಿ ಗಿರೀಶ್ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಪಬ್​ ಮೇಲೆ ದಾಳಿ ನಡೆಸಿ 50 ಮಹಿಳಾ ಡ್ಯಾನ್ಸರ್​ಗಳನ್ನು ರಕ್ಷಣೆ ಮಾಡಿ ಪ್ರಕರಣ ದಾಖಲಿಸಿದೆ. ಸಿಸಿಬಿ ಪೊಲೀಸರು ಎಂಟ್ರಿಯಾಗುತ್ತಿದ್ದಂತೆ ಬರ್ತ್​​ಡೇ ಬಾಯ್ ಕುಣಿಗಲ್ ಗಿರಿ, ತನ್ನ ಕಾರ್​ ಬಿಟ್ಟು ಕಟ್ಟಡ ಹಾರಿ ಎಸ್ಕೇಪ್ ಆಗಿದ್ದಾನೆ. ಪೊಲೀಸರು ಕುಣಿಗಲ್ ಗಿರಿ ಕಾರು ಸೇರಿದಂತೆ, ಒಟ್ಟು‌ 5 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.

For All Latest Updates

TAGGED:

ABOUT THE AUTHOR

...view details