ಬೆಂಗಳೂರು: ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಡೆದಹಳ್ಳಿ ಬಳಿ ಮದ್ಯ ಸೇವಿಸಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.
ಮದ್ಯ ಸೇವಿಸಿ ಇಬ್ಬರ ನಡುವೆ ಗಲಾಟೆ: ಹೊಡೆದಾಟ ಕೊಲೆಯಲ್ಲಿ ಅಂತ್ಯ - Rowdisheater murder
ಬಾರ್ ಒಪನ್ ಆಗಿ ಕೆಲವೇ ಗಂಟೆಗಳಲ್ಲಿ ಮದ್ಯ ಸೇವಿಸಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ರೌಡಿಶೀಟರ್ ಕರಣ್ ಸಿಂಗ್ ಕೊಲೆಯಾದ ವ್ಯಕ್ತಿ.
ಮದ್ಯ ಸೇವಿಸಿ ಇಬ್ಬರ ನಡುವೆ ಗಲಾಟೆ: ಕೊಲೆಯಲ್ಲಿ ಅಂತ್ಯ
ರೌಡಿಶೀಟರ್ ಕರಣ್ ಸಿಂಗ್ ಕೊಲೆಯಾದ ವ್ಯಕ್ತಿ. ಮದ್ಯ ಖರೀದಿಸಿದ ಹುಮ್ಮಸ್ಸಿನಲ್ಲಿ ಇಂದು ಸ್ನೇಹಿತ ಪ್ರಭು ಎಂಬಾತನ ಜೊತೆ ಕ್ಷುಲ್ಲಕ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದಿದೆ. ಎಣ್ಣೆ ಏಟಲ್ಲಿ ಗಲಾಟೆ ತಾರಕಕ್ಕೇರಿದೆ. ಈ ವೇಳೆ ಪ್ರಭು, ಕರಣ್ ಸಿಂಗ್ ಎದೆಗೆ ಚುಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.