ಬೆಂಗಳೂರು:ಸುಬ್ರಹ್ಮಣ್ಯಪುರ ಠಾಣೆಯ ರೌಡಿಶೀಟರ್ ಆಗಿರುವ ಕುಳ್ಳ ರಿಜ್ವಾನ್ನನ್ನು ಗೂಂಡಾ ಆ್ಯಕ್ಟ್ನಡಿ ಬಂಧಿಸಲಾಗಿತ್ತು. ಆರೋಪಿ ಬ್ಯಾರಕ್ನಲ್ಲೇ ಇದ್ದುಕೊಂಡು ತನ್ನ ಹುಟ್ಟುಹಬ್ಬದ ದಿನ ಕೇಕ್ ಕಟ್ ಮಾಡಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ರೌಡಿಗಳು ಪುಂಡಾಟಿಕೆ ನಡೆಸುವ ಹಿನ್ನೆಲೆಯಲ್ಲಿ ಪೊಲೀಸರು ಅವರ ವಿರುದ್ಧ ಕೇಸ್ ಹಾಕಿ, ಜೈಲಿಗೆ ಕಳುಹಿಸ್ತಾರೆ. ಆದ್ರೆ ಈ ರೌಡಿಗಳಿಗೆ ತಾವಿರುವ ಪ್ರದೇಶಗಳಿಗಿಂತ ಜೈಲೇ ವಾಸಿ ಅನ್ನಿಸುವಂತಿದೆ. ಏಕೆಂದರೆ ಇಲ್ಲೊಬ್ಬ ರೌಡಿ ಜೈಲಿನಲ್ಲಿ ಅದ್ಧೂರಿಯಾಗಿ ತನ್ನ ಹುಟ್ಟುಹಬ್ಬ ಆಚರಿಸಿದ್ದಾನೆ.