ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಪುಡಿ ರೌಡಿಗಳಿಂದ ಬಡ ವ್ಯಾಪಾರಿಗಳ ಸುಲಿಗೆ ಯತ್ನ - ನಿಲ್ಲುತ್ತಿಲ್ಲ ರೋಲ್ ಕಾಲ್

ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ರಸ್ತೆಯ ಬಳಿ ಹೂ, ಹಣ್ಣು ಹಾಗೂ ತರಕಾರಿಯನ್ನು ಕೆಲ ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದರು. ಈ ವೇಳೆ ಕೆಲ ಪುಡಿ ರೌಡಿಗಳು ಅಲ್ಲಿಗೆ ಬಂದು ಧಮಕಿ ಹಾಕಿ ಅವರ ಹತ್ತಿರ ಹಣ ವಸೂಲಿಗೆ ಮುಂದಾಗಿದ್ದಾರೆ.

Rowdies take money by merchants
ವ್ಯಾಪಾರಿಗಳಿಂದ ಹಣ ವಸೂಲಿ ಮಾಡಿದ ಪುಡಿ ರೌಡಿಗಳು

By

Published : Jul 31, 2020, 5:45 PM IST

ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಕೆಲವು ಮಾರುಕಟ್ಟೆಗಳನ್ನು ಸೀಲ್​​ಡೌನ್ ಮಾಡಲಾಗಿದೆ. ಮಾರುಕಟ್ಟೆಗಳು ಸೀಲ್​​ಡೌನ್ ಆಗಿರುವ ಕಾರಣ ಕಿಮ್ಸ್ ಆಸ್ಪತ್ರೆಯ ರಸ್ತೆಯ ಬಳಿ ಹೂ, ಹಣ್ಣು ಹಾಗೂ ತರಕಾರಿಯನ್ನು ಕೆಲ ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದರು. ಈ ವೇಳೆ ಕೆಲ ಪುಡಿ ರೌಡಿಗಳು ಅಲ್ಲಿಗೆ ಬಂದು ವ್ಯಾಪಾರಿಗಳನ್ನು ಬೆದರಿಸಿ ಅವರಿಂದ ಹಣ ವಸೂಲಿಗೆ ಮುಂದಾದರು.

ಇಲ್ಲಿ ವ್ಯಾಪಾರ ಮಾಡಲು ನಾವು ಅನುಮತಿ ಪಡೆದಿದ್ದೇವೆ. ನೀವಿಲ್ಲಿ ವ್ಯಾಪಾರ ಮಾಡ್ತಿದ್ದೀರಿ. ಹೀಗಾಗಿ ಪ್ರತಿಯೊಬ್ಬರೂ ನೂರು ರೂಪಾಯಿಯಂತೆ ಕೊಡಬೇಕೆಂದು ಸಣ್ಣಪುಟ್ಟ ವ್ಯಾಪಾರಸ್ಥರ ಬಳಿ‌ ಹಣ ಪೀಕುತ್ತಿದ್ದರು.

ವ್ಯಾಪಾರಿಗಳಿಂದ ಹಣ ವಸೂಲಿ ಮಾಡಿದ ಪುಡಿ ರೌಡಿಗಳು

ಈ ವೇಳೆ ಕೆಲ ವ್ಯಾಪಾರಿಗಳು, ವ್ಯಾಪಾರವಿಲ್ಲದ ಕಾರಣ ನಮ್ಮಲ್ಲಿ ಹಣವಿಲ್ಲವೆಂದು ಹೇಳಿದ್ದಾರೆ. ಅವರಿಗೆ ನಾಳೆಯಿಂದ ಇಲ್ಲಿ ವ್ಯಾಪಾರ‌ ಮಾಡಬೇಡಿ, ಹೋಗ್ತಾ ಇರಿ ಎಂದು ಅವಾಜ್ ಹಾಕಿದ್ದಾರೆ.

ವ್ಯಾಪಾರಿಗಳಿಂದ ಈ ಪುಂಡರು ಹಣ ವಸೂಲಿ ಮಾಡುವ ವಿಡಿಯೊ ಸೆರೆಯಾಗಿದ್ದು, ಸಂಬಂಧಿಸಿದ ಪೊಲೀಸರಿಗೆ ಮಾಹಿತಿ ತಿಳಿಸಲಾಗಿದೆ.

ABOUT THE AUTHOR

...view details