ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಪುಡಿ ರೌಡಿಗಳ ಹಾವಳಿ ಮಿತಿಮೀರುತ್ತಿದೆ. ಹಣಕ್ಕಾಗಿ ಮಾರಕಾಸ್ತ್ರಗಳನ್ನು ತೋರಿಸಿ ಅಂಗಡಿ ಮಾಲೀಕರನ್ನು ಬೆದರಿಸಿ ಅಟ್ಟಹಾಸ ಪ್ರದರ್ಶಿಸುತ್ತಿದ್ದಾರೆ. ಇದೀಗ ಇಂತಹದ್ದೇ ಘಟನೆ ನಗರದಲ್ಲಿ ನಡೆದಿದೆ.
ಬಾರ್ಗೆ ನುಗ್ಗಿ ಪುಡಿರೌಡಿಗಳ ದಾಂಧಲೆ: ಪುಂಡರ ಕೃತ್ಯ ಸಿಸಿಟಿವಿಯಲ್ಲಿ ಸೆರೆ - Bengaluru latest News
ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಇಟ್ಟಮಡು ಬಳಿಯ ಎಸ್ಎಲ್ವಿ ಬಾರ್ಗೆ ನುಗ್ಗಿದ ಕಿಡಿಗೇಡಿಗಳಿಬ್ಬರು ದಾಂಧಲೆ ನಡೆಸಿದ್ದಾರೆ.
ದಾಂಧಲೆ ನಡೆಸಿದ ಪುಡಿರೌಡಿಗಳು
ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಇಟ್ಟಮಡು ಬಳಿಯ ಎಸ್ಎಲ್ವಿ ಬಾರ್ಗೆ ನುಗ್ಗಿದ ಕಿಡಿಗೇಡಿಗಳಿಬ್ಬರು ಗಲಾಟೆ ಮಾಡಿದ್ದಾರೆ. ನಿನ್ನೆ ಸಂಜೆ 7.30ರ ವೇಳೆಗೆ ಬಾರ್ಗೆ ನುಗ್ಗಿದ ಇಬ್ಬರು, ಲಾಂಗ್ ಹಿಡಿದು ಅಲ್ಲಿದ್ದ ಜನರನ್ನು ಬೆದರಿಸಿದ್ದಾರೆ. ಜೊತೆಗೆ ಶಾಪ್ನ ಗ್ಲಾಸ್ಗಳನ್ನು ಒಡೆದು ಹಾಕಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
Last Updated : Aug 30, 2021, 12:30 PM IST