ಬೆಂಗಳೂರು: ನಗರದಲ್ಲಿ ರಾತ್ರಿ ವೇಳೆ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ಅದ್ರಲ್ಲೂ ಪೊಲೀಸರು ರಾತ್ರಿ ಪಾಳಿಯಲ್ಲಿದ್ದರೂ ಸಹ ಖಾಕಿ ಕಣ್ತಪ್ಪಿಸಿ ಅಟ್ಟಹಾಸ ಮೆರೆಯುತ್ತಿದ್ದಾರೆ.
ಬೆಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳ ಗಾಜು ಪುಡಿಗಟ್ಟಿ ಪುಂಡರ ಹುಚ್ಚಾಟ
ಐದು ಮಂದಿ ಪುಂಡರು ಎರಡು ಬೈಕ್‌ಗಳಲ್ಲಿ ಬಂದು 10ಕ್ಕೂ ಅಧಿಕ ಕಾರುಗಳ ಕಿಟಕಿ ಗಾಜುಗಳನ್ನು ಪುಡಿಗಟ್ಟಿದ್ದಾರೆ.
ಕೆಂಗೇರಿ ಹಾಗೂ ಆರ್.ಆರ್.ನಗರ ಠಾಣಾ ವ್ಯಾಪ್ತಿಯಲ್ಲಿ ನಡುರಸ್ತೆಯಲ್ಲಿ ಕಂಡ ಕಂಡ ಕಾರುಗಳ ಕಿಟಕಿ ಗಾಜುಗಳನ್ನು ಈ ದಾಂಧಲೆಕೋರರು ಪೀಸ್ ಪೀಸ್ ಮಾಡಿದ್ದಾರೆ. ಐದು ಮಂದಿ ಪುಂಡರು ಎರಡು ಬೈಕ್‌ಗಳಲ್ಲಿ ಬಂದು 10ಕ್ಕೂ ಹೆಚ್ಚು ಕಾರುಗಳ ಕಿಟಕಿ ಗಾಜುಗಳನ್ನು ಧ್ವಂಸ ಮಾಡಿದ್ದಾರೆ.
ತಡರಾತ್ರಿ 2- 3 ಘಂಟೆ ಸಮಯದಲ್ಲಿ ಕೃತ್ಯ ನಡೆದಿದೆ. ದುಷ್ಕರ್ಮಿಗಳ ಪುಂಡಾಟಿಕೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತಾಗಿ ಎರಡು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಕೆಂಗೇರಿಯ ಭಾಗೇಗೌಡ ಲೇಔಟ್, ಆರ್.ಆರ್.ನಗರದ ಕೃಷ್ಣಾ ಗಾರ್ಡನ್ ಸುತ್ತಮುತ್ತ ಕೃತ್ಯ ನಡೆದಿರುವ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಚಲನವಲನದ ಮೇರೆಗೆ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.