ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಮತ್ತೆ ಝುಳಪಿಸಿದ ಲಾಂಗು ಮಚ್ಚು... ಹಾಡಹಗಲೇ ಕಿರಾತಕರ ಅಟ್ಟಹಾಸ - ಅಮಾಯಕನ ಮೇಲೆ ಮಚ್ಚು ಬೀಸಿದ ಕಿರಾತಕ

ಹಾಡಹಗಲೇ ವ್ಯಕ್ತಿವೋರ್ವನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿ, ಆತನ ಕೊಲೆಗೆ ಯತ್ನಿಸಿರುವ ಪ್ರಕರಣ ಬೆಂಗಳೂರಿನ ಆನಂದ್ ನಗರದಲ್ಲಿ‌ ನಡೆದಿದೆ.

ಗುಳ್ಳಪ್ಪ

By

Published : Sep 30, 2019, 12:50 PM IST

Updated : Sep 30, 2019, 3:09 PM IST

ಬೆಂಗಳೂರು: ನಗರದಲ್ಲಿ ಮತ್ತೆ ಲಾಂಗು ಮಚ್ಚು ಸದ್ದು ಮಾಡಿವೆ. ಹಾಡಹಗಲೇ ವ್ಯಕ್ತಿವೋರ್ವನನ್ನು ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಲು ಯತ್ನಿಸಿರುವ ಪ್ರಕರಣ ಜೆ ಬಿ ನಗರ ಠಾಣಾವ್ಯಾಪ್ತಿಯ ಆನಂದ್ ನಗರದಲ್ಲಿ‌ ಬೆಳಕಿಗೆ ಬಂದಿದೆ.

ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯ

ಆನಂದ್ ನಗರದ ನಿವಾಸಿ ಗುಳ್ಳಪ್ಪ ಎಂಬುವರ ಮೇಲೆ ಈ ಹಲ್ಲೆ ನಡೆದಿದೆ. ಗುಳ್ಳಪ್ಪ ಅವರು ಮಕ್ಕಳಾದ ವಿಗ್ನೇಶ್, ಉದಯ್ ಜೊತೆ ಕುಟುಂಬ ಸಮೇತ ವಾಸವಾಗಿದ್ರು. ಈ ವೇಳೆ ದಿಢೀರ್​ ಬಂದ ಕಿರತಾಕರು ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ.‌ ಈ ದೃಶ್ಯ ನೋಡಿ ಆನಂದ್ ನಗರ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.

ಆರೋಪಿ ವೆಂಕಟೇಶ್‌ ನಡು ರಸ್ತೆಯಲ್ಲೇ ಲಾಂಗ್ ಹಿಡಿದು ಗುಳ್ಳಪ್ಪನನ್ನ ಅಟ್ಟಾಡಿಸಿಕೊಂಡು ಹೋಗಿ ಹೊಡೆದಿದ್ದಾನೆ. ಲಾಂಗ್ ಬೀಸಿದ್ದಕ್ಕೆ ಗುಳ್ಳಪ್ಪನ ತಲೆಗೆ ಬಲವಾದ ಏಟು ಬಿದ್ದಿದೆ. ಈ ವೇಳೆ ತಡೆಯಲು ಬಂದ ಗುಳ್ಳಪ್ಪರ ಮಗನಿಗೂ ಪೆಟ್ಟು ಬಿದ್ದಿದೆ. ಕೂಡಲೇ ಗುಳ್ಳಪ್ಪನನ್ನ ಸ್ಥಳೀಯರು ಆಸ್ಪತ್ರೆ ದಾಖಲಿಸಿದ್ದಾರೆ. ಇನ್ನು ಲಾಂಗ್ ಹಿಡಿದು ಅಟ್ಟಾಡಿಸಿಕೊಂಡು ಹೊಡೆದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ‌ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Last Updated : Sep 30, 2019, 3:09 PM IST

ABOUT THE AUTHOR

...view details