ಬೆಂಗಳೂರು: ಲಾಕ್ಡೌನ್ ರಿಲೀಫ್ ಆಗ್ತಾ ಇದ್ದ ಹಾಗೆ ರೌಡಿಗಳ ಅಟ್ಟಹಾಸ ಮತ್ತೆ ಹೆಚ್ಚಾಗುತ್ತಿದೆ. ತಡರಾತ್ರಿ ಹಳೇ ವೈಷ್ಯಮ್ಯದ ಹಿನ್ನೆಲೆ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಕೊ ಲೇಔಟ್ ಠಾಣಾ ವ್ಯಾಪ್ತಿಯ ಬಿಟಿಎಂ ಲೇಔಟ್ ಎರಡನೇ ಹಂತದ ಎನ್. ಎಸ್ ಪಾಳ್ಯದಲ್ಲಿ ನಡೆದಿದೆ.
ಹಳೇ ವೈಷಮ್ಯದ ಹಿನ್ನೆಲೆ ಮಾಜಿ ರೌಡಿಶೀಟರ್ ಬರ್ಬರ ಹತ್ಯೆ - Bangalore Assassination News
ಅಪರಾಧ ಕೃತ್ಯಗಳನ್ನ ಬಿಟ್ಟು ಆಟೋ ಓಡಿಸುತ್ತಿದ್ದ ವ್ಯಕ್ತಿಯನ್ನ ತಡ ರಾತ್ರಿ ಮನೆ ಬಳಿ ಬಂದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ. ಪರಿಣಾಮ ಮಣಿ ಸ್ಥಳದಲ್ಲೇ ಸಾವನ್ನಪ್ಪಿದ್ದು ತಡ ರಾತ್ರಿಯೇ ಮೈಕೊ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೌಡಿ ಶೀಟರ್ ಬರ್ಬರ ಹತ್ಯೆ
ಮಣಿ 27 ವರ್ಷ ಹತ್ಯೆಯಾದ ಯುವಕ. ಈ ಹಿಂದೆ ರೌಡಿಶೀಟರ್ ಆಗಿದ್ದ. ಇವನು ಅನೇಕ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಸದ್ಯ ಆಟೋ ಓಡಿಸುತ್ತಿದ್ದ. ತಡ ರಾತ್ರಿ ಮನೆಯ ಬಳಿ ಬಂದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ. ಪರಿಣಾಮ ಮಣಿ ಸ್ಥಳದಲ್ಲೇ ಮೃತಪಟ್ಟಿದ್ದು, ತಡ ರಾತ್ರಿಯೇ ಮೈಕೊ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಶಂಕೆ ಮೇರೆಗೆ ಕೆಲವು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ರೌಡಿ ಶೀಟರ್ ಸಂತೋಷ್ ಅಂಡ್ ಟೀಮ್ ಈ ದಾಳಿ ನಡೆಸಿರುವ ಸಾಧ್ಯತೆ ಇದ್ದು, ಮೈಕೊ ಲೇಔಟ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Last Updated : Aug 4, 2020, 10:01 AM IST