ಕರ್ನಾಟಕ

karnataka

ETV Bharat / state

ರೋಷನ್ ಬೇಗ್ ಆರೋಗ್ಯದಲ್ಲಿ ಏರುಪೇರು: ಜಯದೇವ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ - ರೋಷನ್ ಬೇಗ್ ಆರೋಗ್ಯದಲ್ಲಿ ಏರು ಪೇರು

ಹೃದಯ‌ ಸಂಬಂಧಿ ಕಾಯಿಲೆಯಿಂದ ಜಯದೇವ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಚಿವ ರೋಷನ್ ಬೇಗ್, ಬಂಧನವಾಗುವ ಎರಡು ದಿನ ಹಿಂದೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಂಜಿಯೋಗ್ರಾಂ ಮಾಡಿಸಿಕೊಂಡಿದ್ದರು ಎನ್ನಲಾಗ್ತಿದೆ. ಇದೀಗ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ.

Roshan Beg receiving treatment at Jayadeva Hospital Intensive Care Unit
ರೋಷನ್ ಬೇಗ್ ಆರೋಗ್ಯದಲ್ಲಿ ಏರು ಪೇರು

By

Published : Nov 26, 2020, 11:46 AM IST

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ರೋಷನ್ ಬೇಗ್ ಆರೋಗ್ಯದಲ್ಲಿ ಸದ್ಯ ಏರುಪೇರು ಉಂಟಾಗಿದೆ.

ಹೃದಯ‌ ಸಂಬಂಧಿ ಕಾಯಿಲೆಯಿಂದ ಜಯದೇವ ಆಸ್ಪತ್ರೆಗೆ ದಾಖಲಾಗಿರುವ ರೋಷನ್ ಬೇಗ್, ಬಂಧನವಾಗುವ ಎರಡು ದಿನ ಹಿಂದೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಂಜಿಯೋಗ್ರಾಂ ಮಾಡಿಸಿಕೊಂಡಿದ್ದರು. ಹೀಗಾಗಿ ಸದ್ಯ ಜಯದೇವ ಆಸ್ಪತ್ರೆಯಲ್ಲಿ ರೋಷನ್ ಬೇಗ್ ಅವರನ್ನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಓದಿ:ಮಾಜಿ ಸಚಿವ ರೋಷನ್ ಬೇಗ್ ಜಯದೇವ ಆಸ್ಪತ್ರೆಗೆ ದಾಖಲು

ಜಯದೇವ ಆಸ್ಪತ್ರೆ ಮೂಲಗಳ ಮಾಹಿತಿ ಪ್ರಕಾರ, ಬೇಗ್​ ಹಾರ್ಟ್ ಅಲ್ಲಿ ಬ್ಲಾಕೇಜೆಸ್ ಇದೆ ಎಂದು ಮಾಹಿತಿ ನೀಡಿದ್ದಾರೆ. ಈಗಾಗಲೇ ಅವರ ಹಿಂದಿನ ಆಸ್ಪತ್ರೆಯ ವರದಿ ಪಡೆದಿದ್ದೇವೆ. ನಮ್ಮಲ್ಲಿಯೂ ಸಹ ಚಿಕಿತ್ಸೆ ಮುಂದುವರಿದಿದ್ದು, ಅವರ ರಿಪೋರ್ಟ್ ಅನ್ನು ಇವ್ಯಾಲ್ಯೂವೆಷನ್ ಮಾಡಬೇಕಿದೆ. ನಂತರ ಅವರ ಆರೋಗ್ಯ ಸ್ಥಿತಿಗತಿ ಬಗ್ಗೆ ಹೇಳಬಹುದು. ಅಲ್ಲಿಯ ತನಕ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಲು ಆಗುವುದಿಲ್ಲ ಎಂದಿದ್ದಾರೆ.

ABOUT THE AUTHOR

...view details