ಬೆಂಗಳೂರು: ಐಎಂಎ ವಂಚನೆ ಪ್ರಕರಣ ಸಂಬಂಧ ವಿಚಾರಣೆ ಹಾಜರಾಗುವಂತೆ ಮಾಜಿ ಸಚಿವ ಆರ್.ರೋಷನ್ ಬೇಗ್ಗೆ ಎಸ್ಐಟಿ ನೋಟಿಸ್ ನೀಡಿದೆ.
ಐಎಂಎ ವಂಚನೆ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ರೋಷನ್ ಬೇಗ್ಗೆ ಎಸ್ಐಟಿ ನೋಟಿಸ್ - undefined
ಐಎಂಎ ವಂಚನೆ ಪ್ರಕರಣ. ವಿಚಾರಣೆಗೆ ಹಾಜರಾಗುವಂತೆ ರೋಷನ್ ಬೇಗ್ ಅವರಿಗೆ ಎಸ್ಐಟಿ ನೋಟಿಸ್. ಇಂದು ತನಿಖಾ ತಂಡದ ಮುಂದೆ ಬೇಗ್ ಹಾಜರಾಗುವ ಸಾಧ್ಯತೆ.

ರೋಷನ್ ಬೇಗ್
ಐಎಂಎ ಸಂಸ್ಥೆಯ ಮಾಲೀಕ ಮೊಹಮ್ಮದ್ ಮನ್ಸೂರ್ ಜೊತೆ ರೋಷನ್ ಬೇಗ್ ಹಣದ ವ್ಯವಹಾರ ನಡೆಸಿದ್ದಾರೆ ಎಂಬುದನ್ನು ತನಿಖೆಯಲ್ಲಿ ಎಸ್ಐಟಿ ಪತ್ತೆ ಹಚ್ಚಿತ್ತು.
ಈ ಹಿನ್ನೆಲೆಯಲ್ಲಿ ಗುರುವಾರ ವಿಚಾರಣೆಗೆ ಹಾಜರಾಗುವಂತೆ ರೋಷನ್ ಬೇಗ್ ಅವರಿಗೆ ನೋಟಿಸ್ ನೀಡಿದೆ. ಬುಧವಾರವಷ್ಟೇ ಸ್ವೀಕರ್ ಕಚೇರಿಗೆ ತೆರಳಿ ಬೇಗ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.