ಕರ್ನಾಟಕ

karnataka

ETV Bharat / state

ಐಎಂಎ ಬಹುಕೋಟಿ ವಂಚನೆ ಕೇಸ್​: ಎಸ್ಐಟಿಯಿಂದ ಮುಕ್ತಿ ಪಡೆದ ಬೇಗ್​, ಸಿಬಿಐ ವಿಚಾರಣೆ ಎದುರಿಸ್ತಾರಾ? - IMA fraud case

ರಾಜ್ಯ ಸರ್ಕಾರ ಐಎಂಎ ಬಹುಕೋಟಿ ವಂಚನೆ ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡಿದ್ದು, ಇನ್ಮುಂದೆ ಪ್ರಕರಣವನ್ನ ಸಿಬಿಐ ಕೈಗೆತ್ತಿಕೊಂಡು ತನಿಖೆ ನಡೆಸಲಿದೆ. ಹೀಗಾಗಿ ರೋಷನ್ ಬೇಗ್ ಎಸ್ಐಟಿ ಎದುರು ಹಾಜರಾಗದೆ, ನೇರವಾಗಿ ಸಿಬಿಐ ಎದುರೇ ಹಾಜರಾಗಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.

ಐಎಂಎ ಬಹುಕೋಟಿ ವಂಚನೆ ಪ್ರಕರಣ: ಎಸ್ಐಟಿ ತನಿಖೆಯಿಂದ ಮುಕ್ತಿ ಪಡೆದ ರೋಷನ್ ಬೇಗ್...ಆದರೆ,,,,?

By

Published : Aug 26, 2019, 12:40 PM IST

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳಿಂದ ರೋಷನ್ ಬೇಗ್‌ ಮುಕ್ತಿ ಪಡೆದಿದ್ದಾರೆ.

ಹೌದು, ಈಗಾಗ್ಲೇ ಪ್ರಕರಣವನ್ನ ರಾಜ್ಯ ಸರ್ಕಾರ ಸಿಬಿಐಗೆ ವರ್ಗಾವಣೆ ಮಾಡಿದೆ. ಹೀಗಾಗಿ ಇನ್ಮುಂದೆ ಪ್ರಕರಣವನ್ನ ಸಿಬಿಐ ಕೈಗೆತ್ತಿಕೊಂಡು ತನಿಖೆ ನಡೆಸಲಿದೆ.

ರಾಜ್ಯ ಸರ್ಕಾರವೇ ಪ್ರಕರಣವನ್ನ ವರ್ಗಾವಣೆ ಮಾಡಿದ್ದು, ಪ್ರಕರಣದಿಂದ ಎಸ್ಐಟಿ ಕೊಂಚ ಹಿಂದೆ ಸರಿದಿದೆ ಎಂದು ಎಸ್ಐಟಿ ಹಿರಿಯ ಅಧಿಕಾರಿವೋರ್ವರು ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಇದೇ ಕಾರಣಕ್ಕೆ ರೋಷನ್ ಬೇಗ್ ಎಸ್ಐಟಿ ಎದುರು ಹಾಜರಾಗದೆ, ಸಿಬಿಐ ಒಂದು ವೇಳೆ ಬುಲಾವ್ ಕೊಟ್ಟರೆ ನೇರವಾಗಿ ಸಿಬಿಐ ಎದುರೇ ಹಾಜರಾಗಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.

ಇನ್ನು ಐಎಂಎ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮನ್ಸೂರ್ ಆಡಿಯೋ ಹಾಗೂ ವಿಡಿಯೋ ಬಿಡುಗಡೆಯಾಗಿ ರೋಷನ್ ಬೇಗ್ ಹೆಸರು ಪ್ರಸ್ತಾಪವಾಗಿತ್ತು. ಹೀಗಾಗಿ ಎರಡು ಬಾರಿ ಎಸ್ಐಟಿ ವಿಚಾರಣೆ ನಡೆಸಿ‌ ರೋಷನ್ ಬೇಗ್ ರನ್ನು ಬಿಟ್ಟು ಕಳುಹಿಸಿದ್ದರು. ಅನಂತರ ಎಸ್​ಐಟಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು. ಆದರೆ ಬೇಗ್​ ಗೈರಾಗಿದ್ದರು.

ABOUT THE AUTHOR

...view details