ಬೆಂಗಳೂರು: ಐಎಂಎ ಜ್ಯುವೆಲ್ಲರ್ಸ್ ವಂಚನೆ ಪ್ರಕರಣ ಸಂಬಂಧ ಎಸ್ಐಟಿ ವಿಚಾರಣೆ ಮುಗಿಸಿ ಹೊರ ಬಂದ ಶಾಸಕ ರೋಷನ್ ಬೇಗ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಐಎಂಎ ವಂಚನೆ ಪ್ರಕರಣ: SIT ವಿಚಾರಣೆ ಮುಗಿಸಿ ಹೊರ ಬಂದ ರೋಷನ್ ಬೇಗ್ - kannadanews
ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರೋಷನ್ ಬೇಗ್‌ರನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ರು.
ಐಎಂಎ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ವಿಡಿಯೋ ಹಾಗೂ ಆಡಿಯೋದಲ್ಲಿ ಬೇಗ್ ಹೆಸರು ಪ್ರಸ್ತಾಪ ಮಾಡಿರುವ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಶಾಸಕ ರೋಷನ್ ಬೇಗ್ ಅವರ ವಿಚಾರಣೆ ನಡೆಸಿದ್ರು.
ಈ ವೇಳೆ ಪ್ರತಿಕ್ರಿಯಿಸಿದ ಶಾಸಕ ಬೇಗ್, ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡ್ತೇನೆ. ನಾನು ನಿನ್ನೆ ಪುಣೆಗೆ ತೆರಳ್ಬೇಕು ಎಂದಿದ್ದೆ. ಅಷ್ಟರೊಳಗೆ ಎಸ್‌ಐಟಿ ವಿಚಾರಣೆಯ ನಿಮಿತ್ತ ನನ್ನನ್ನು ಕರೆತಂದಿದೆ. ಇದೀಗ ಎಸ್‌ಐಟಿ ಎಲ್ಲಿಗೆ ಬೇಕಾದ್ರೂ ಹೋಗಬಹುದು ಎಂದು ಹೇಳಿದೆ. ನಾನೀಗ ಮನೆಗೆ ತೆರಳ್ತಿದ್ದೇನೆ. 19 ನೇ ತಾರೀಕು ಮತ್ತೆ ವಿಚಾರಣೆಗೆ ಹಾಜರಾಗ್ತೇನೆ ಎಂದು ಅವರು ತಿಳಿಸಿದ್ರು.