ಕರ್ನಾಟಕ

karnataka

ETV Bharat / state

ಐಎಂಎ ವಂಚನೆ ಪ್ರಕರಣ : ತನಿಖೆಗೆ ಹಾಜರಾಗಲು ಸಮಯಾವಕಾಶ ಕೇಳಿದ ರೋಷನ್​​ ಬೇಗ್! - undefined

ಇಂದು ಎಸ್ಐಟಿ ಕಚೇರಿಗೆ ತನ್ನ ಪಿಎ ಅವರನ್ನು ಕಳುಹಿಸಿ ಹುಟ್ಟುಹಬ್ಬ, ಹಜ್ ಯಾತ್ರೆ, ವಿಧಾನಸಭೆ ಬೆಳವಣಿಗೆ ಇದೆ ಹೀಗಾಗಿ ಜುಲೈ 25 ರಂದು ವಿಚಾರಣೆಗೆ ಶಾಸಕ‌ ಹಾಜರಾಗ್ತಾರೆ ಎಂದು ಮನವಿ ಮಾಡಿದ್ದಾರೆ. ಆದ್ರೆ, ಎಸ್ಐಟಿ ಅಧಿಕಾರಿಗಳು 19ರ ಒಳಗೆ ವಿಚಾರಣೆಗೆ ಹಾಜರಾಗಬೇಕೆಂದು‌ ಸೂಚನೆ ನೀಡಿದ್ದಾರೆ.

ಐಎಂಎ ವಂಚನೆ ಪ್ರಕರಣ

By

Published : Jul 15, 2019, 4:27 PM IST

ಬೆಂಗಳೂರು : ಐಎಂಎ ಪ್ರಕರಣದ ವಿಚಾರಣೆಗೆ ಇಂದು ಶಿವಾಜಿನಗರ ಶಾಸಕ ರೋಷನ್ ಬೇಗ್ ಹಾಜರಾಗುವಂತೆ ಎಸ್ಐಟಿ ಅಧಿಕಾರಿಗಳು ಎರಡನೇ ನೋಟಿಸ್ ನೀಡಿದ್ರು. ಆದ್ರೆ, ಇದಕ್ಕೆ ಸ್ಪಂದಿಸದ ಶಾಸಕ ರೋಷನ್ ಬೇಗ್ ಇವತ್ತು ವಿಚಾರಣೆಗೆ ಗೈರು ಹಾಜರಾಗಿದ್ದಾರೆ.

ಇಂದು ಎಸ್ಐಟಿ ಕಚೇರಿಗೆ ತನ್ನ ಪಿಎ ಅವರನ್ನ ಕಳುಹಿಸಿ ಹುಟ್ಟು ಹಬ್ಬ, ಹಜ್ ಯಾತ್ರೆ, ವಿಧಾನಸಭೆ ಬೆಳವಣಿಗೆ ಇದೆ ಹೀಗಾಗಿ ಜುಲೈ 25 ರಂದು ವಿಚಾರಣೆಗೆ ಶಾಸಕ‌ ಹಾಜರಾಗ್ತಾರೆ ಎಂದು ಮನವಿ ಮಾಡಿದ್ದಾರೆ. ಆದ್ರೆ, ಎಸ್ಐಟಿ ಅಧಿಕಾರಿಗಳು 19ರ ಒಳಗೆ ವಿಚಾರಣೆಗೆ ಹಾಜರಾಗಬೇಕೆಂದು‌ ಸೂಚನೆ ನೀಡಿದ್ದಾರೆ.

ಐಎಂಎ ಬಹುಕೋಟಿ ವಂಚನೆಯಲ್ಲಿ ಐಎಂಎ ಕಂಪನಿ ಮಾಲೀಕ ಮನ್ಸೂರ್, ರೋಷನ್ ಬೇಗ್​​ಗೆ​ ಹಣ ನೀಡಿದ್ದಾಗಿ ಹೇಳಿದ್ದ . ಹೀಗಾಗಿ ಮನ್ಸೂರ್ ಖಾನ್ ಬಿಡುಗಡೆ ಮಾಡಿದ್ದ ಆಡಿಯೋ ಬಗ್ಗೆ ತನಿಖೆ ನಡೆಸಿದ ಎಸ್ಐಟಿ‌, ಮನ್ಸೂರ್ ಆಡಿಯೋದಲ್ಲಿ ಸಾಮ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ನೋಟಿಸ್ ನೀಡಿದ್ರು ಹಾಜರಾಗದೇ ಮತ್ತೆ ರೋಷನ್​​ ಬೇಗ್ ಗೈರಾಗಿದ್ದಾರೆ.


For All Latest Updates

TAGGED:

ABOUT THE AUTHOR

...view details