ಬೆಂಗಳೂರು: ಐಎಂಎ ವಂಚನೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಶಿವಾಜಿನಗರ ಶಾಸಕ ಆರ್.ರೋಷನ್ ಬೇಗ್ ಇನ್ನೊಂದು ವಾರ ಕಾಲಾವಕಾಶ ನೀಡುವಂತೆ ಕೋರಿ ಎಸ್ಐಟಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ವಿಚಾರಣೆಗೆ ಗೈರಾದ ರೋಷನ್ ಬೇಗ್: ಒಂದು ವಾರ ಕಾಲಾವಕಾಶ ಕೋರಿ ಎಸ್ಐಟಿಗೆ ಮನವಿ - IMA scam
ಐಎಂಎ ವಂಚನೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಇಂದು ನಾನಾ ಕಾರಣಗಳಿಂದ ಆಗದೇ ಇರುವ ಕಾರಣ ಆರ್.ರೋಷನ್ ಬೇಗ್ ಇನ್ನೊಂದು ವಾರ ಕಾಲಾವಕಾಶ ಕೋರಿ ಎಸ್ಐಟಿಗೆ ಮನವಿ ಮಾಡಿಕೊಂಡಿದ್ದಾರೆ.

ನಾನಾ ಕಾರಣಗಳಿಂದ ಎಸ್ಐಟಿ ವಿಚಾರಣೆಗೆ ಇಂದು ಹಾಜರಾಗಲು ಸಾಧ್ಯವಾಗಿಲ್ಲ. ನನಗೆ ಇನ್ನೊಂದು ವಾರದ ಬಳಿಕ ವಿಚಾರಣೆಗೆ ಹಾಜರಾಗಲು ಅನುಮತಿ ನೀಡಿ ಎಂದು ಎಸ್ಐಟಿ ಮುಖ್ಯಸ್ಥರಿಗೆ ಮನವಿ ಮಾಡಿದ್ದಾರೆ. ಕಾಲಾವಕಾಶ ನೀಡುವ ಬಗ್ಗೆ ಎಸ್ಐಟಿ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎನ್ನಲಾಗಿದೆ.
ಬೇಗ್ಗೆ ಈವರೆಗೂ 4 ಬಾರಿ ಎಸ್ಐಟಿ ನೋಟಿಸ್ ಜಾರಿ ಮಾಡಿತ್ತು. ಆದರೆ ಒಂದು ಬಾರಿ ಮಾತ್ರ ವಿಚಾರಣೆ ಬೇಗ್ ಹಾಜರಾಗಿದ್ದರು. ಅಲ್ಲದೆ ಕೆಲ ದಿನಗಳ ಹಿಂದೆ ಏರ್ಪೋರ್ಟ್ನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಇಂದು ವಿಚಾರಣೆಗೆ ಹಾಜರಾಗದೆ ಮತ್ತೆ ಕಾಲಾವಕಾಶ ಕೇಳಿದ್ದಾರೆ. ಆದರೆ ಇದುವರೆಗೂ ಎಸ್ಐಟಿ ಕಾಲಾವಕಾಶ ಕೊಡುವ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.