ಬೆಂಗಳೂರು: ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ರೋಷನ್ ಬೇಗ್ ಅವರನ್ನ ವಿಚಾರಣೆಗೆ ಹಾಜರಾಗಲು ಎಸ್ಐಟಿ ಅಧಿಕಾರಿಗಳು ಸೂಚನೆ ನೀಡಿದ್ದರು. ಆದರೆ ಇಂದು ಕೂಡ ರೋಷನ್ ಬೇಗ್ ಎಸ್ಐಟಿ ವಿಚಾರಣೆಗೆ ಹಾಜರಾಗದೇ ಮತ್ತೆ ಕಾಲಾವಕಾಶ ಕೇಳಿ ವಿಚಾರಣೆಗೆ ಗೈರಾಗಿದ್ದಾರೆ.
ಎಸ್ಐಟಿ ವಿಚಾರಣೆಗೆ ಮತ್ತೆ ಗೈರು... ಕಾಲಾವಕಾಶ ಕೋರಿದ ರೋಷನ್ ಬೇಗ್
2 ಬಾರಿ ವಿಚಾರಣೆ ನಡೆಸಿರುವ ಎಸ್ಐಟಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ರೋಷನ್ ಬೇಗ್ಗೆ ಸೂಚನೆ ನೀಡಿದ್ದರು. ಆದರೆ 3 ನೇ ಬಾರಿ ಹಾಗೂ 4 ನೇ ಬಾರಿ ವಿಚಾರಣೆಗೆ ಹಾಜರಾಗದೆ ಗೈರಾಗಿದ್ದಾರೆ.
ರೋಷನ್ ಬೇಗ್
ಮನ್ಸೂರ್ ಖಾನ್ ಬಿಡುಗಡೆ ಮಾಡಿದ ಆಡಿಯೋದಲ್ಲಿ ರೋಷನ್ ಬೇಗ್ ಹೆಸರು ಪ್ರಸ್ತಾಪ ಮಾಡಿದ್ದ. ತನಿಖೆಯಲ್ಲಿ ಕೂಡ ರೋಷನ್ ಬೇಗ ಪಾತ್ರ ಕಂಡುಬಂದಿತ್ತು. ಈ ಹಿನ್ನೆಲೆ 2 ಬಾರಿ ವಿಚಾರಣೆ ನಡೆಸಿರುವ ಎಸ್ಐಟಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ರೋಷನ್ ಬೇಗ್ಗೆ ಸೂಚನೆ ನೀಡಿದ್ದರು. ಆದರೆ 3 ನೇ ಬಾರಿ ಹಾಗೂ 4 ನೇ ಬಾರಿ ವಿಚಾರಣೆಗೆ ಹಾಜರಾಗದೆ ಗೈರಾಗಿದ್ದಾರೆ.
ಎಸ್ಐಟಿ ಎದುರು ಹಾಜರಾಗಲು ಕಾಲಾವಕಾಶ ಕೋರಿದ ರೋಷನ್ ಬೇಗ್ಗೆ ಎಸ್ಐಟಿ ಅಧಿಕಾರಿಗಳು ಮುಂದಿನ ದಿನದಲ್ಲಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.