ಬೆಂಗಳೂರು:ಬಕ್ರೀದ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆಯನ್ನ ಮಸೀದಿಗಳಲ್ಲಿ ಸಲ್ಲಿಸಲಾಗುತ್ತದೆ. ಹೀಗಾಗಿ ಎಲ್ಲೆಡೆ ಸೂಕ್ತ ಭದ್ರತೆ ನೀಡಬೇಕು ಎಂದು ಶಿವಾಜಿನಗರ ಅನರ್ಹ ಶಾಸಕ ಆರ್. ರೋಷನ್‌ಬೇಗ್ ನೂತನ ಕಮಿಷನರ್ ಭಾಸ್ಕರ್ ರಾವ್ ಅವರಿಗೆ ಮನವಿ ಮಾಡಿದ್ದಾರೆ.
ಎಲ್ಲೆಡೆ ಬಕ್ರೀದ್ ಸಂಭ್ರಮ: ಭದ್ರತೆ ಕೋರಿ ಕಮಿಷನರ್ಗೆ ಬೇಗ್ ಮನವಿ - ಬಕ್ರೀದ್ ಹಬ್ಬ
ಬಕ್ರೀದ್ ಹಬ್ಬ ಪ್ರಯುಕ್ತ ವಿಶೇಷ ಪ್ರಾರ್ಥನೆಯನ್ನ ಮಸೀದಿಗಳಲ್ಲಿ ಸಲ್ಲಿಸಲಾಗುತ್ತದೆ. ಹೀಗಾಗಿ ಎಲ್ಲೆಡೆ ಸೂಕ್ತ ಭದ್ರತೆ ನೀಡಬೇಕು ಎಂದು ಶಿವಾಜಿನಗರ ಮಾಜಿ ಶಾಸಕ ರೋಷನ್ ಬೇಗ್ ನೂತನ ಕಮಿಷನರ್ ಭಾಸ್ಕರ್ ರಾವ್ಗೆ ಮನವಿ ಮಾಡಿದ್ದಾರೆ.
ಭದ್ರತೆ ಕೋರಿ ಕಮಿಷನರ್ಗೆ ಬೇಗ್ ಮನವಿ
ಖುದ್ದು ಕಮಿಷನರ್ ಭೇಟಿಯಾಗಿ ಮನವಿ ಮಾಡಿದ ರೋಷನ್ ಬೇಗ್, ಬಕ್ರೀದ್ ಆಚರಿಸುವ ಎಲ್ಲಾ ಕಡೆಯೂ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ.ಇದಕ್ಕೆ ಸ್ಪಂದಿಸಿದ ಕಮಿಷನರ್, ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಸಿಬಿ ಪೊಲೀಸರು, ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ. ಈ ವೇಳೆ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ಆಯಾ ಠಾಣಾ ವ್ಯಾಪ್ತಿಯ ಅಧಿಕಾರಿಗಳು ಹೊಣೆ ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ.