ಬೆಂಗಳೂರು: ಪ್ರೇಯಸಿಯನ್ನು ಬೈಕ್ನಲ್ಲಿ ಕೂರಿಸಿಕೊಂಡು ಯುವಕ ಅಪಾಯಕಾರಿ ವೀಲ್ಹಿಂಗ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಡೇಂಜರಸ್ ಬೈಕ್ ವೀಲಿಂಗ್ಗೆ ಪ್ರೇಯಸಿ ಕೊಟ್ಳು ಸಾಥ್.... ಪ್ರೀತಿ ಮತ್ತಲ್ಲಿ ಪ್ರಿಯತಮನ ಹುಚ್ಚಾಟ ಸಖತ್ ವೈರಲ್! - ಸಾಮಾಜಿಕ ಜಾಲತಾಣ
ಸಾಮಾಜಿಕ ಜಾಲತಾಣದಲ್ಲಿ ವೀಲಿಂಗ್ ದೃಶ್ಯ ಸಖತ್ ವೈರಲ್ ಆಗಿದ್ದು, ಕೆಲವರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಹಿರಿಯ ಪೊಲೀಸರು ಎಷ್ಟೇ ಬುದ್ಧಿವಾದ ಹೇಳಿದ್ರೂ, ವೀಲ್ಹಿಂಗ್ ಮಾಡೋದನ್ನ ಯುವಕರು ಬಿಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವೈರಲ್ ಆಗಿರುವ ವೀಲ್ಹಿಂಗ್ ದೃಶ್ಯ
ಬೆಂಗಳೂರಿನ ಹೊರ ವಲಯದ ನೆಲಮಂಗಲ ಬಳಿ ಈ ವೀಲಿಂಗ್ ಸಾಹಸ ನಡೆದಿದೆ. ಸೋನು ಎಂಬ ಯುವತಿ ಹಲೋ ಎಂಬ ಆ್ಯಪ್ನಲ್ಲಿ ಖಾತೆ ಹೊಂದಿದ್ದು, ಅದರಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಿದ ಕೆಲವರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೀಲಿಂಗ್ ದೃಶ್ಯ ಸಖತ್ ವೈರಲ್ ಆಗಿದ್ದು, ಈ ಅಪಾಯಕಾರಿ ಕಸರತ್ತಿಗೆ ಅನೇಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated : Jun 6, 2019, 8:33 PM IST