ಬೆಂಗಳೂರು :ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ನಡೆಸುತ್ತಿರುವ ಆರೋಪದ ಮೇಲೆ ಸಿಸಿಬಿಯಿಂದ ಬಂಧಿತರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಬಗ್ಗೆ ನಟ ಯಶ್ ಮಾತನಾಡಿದ್ದಾರೆ.
ಡ್ರಗ್ಸ್ ಬರೀ ಚಿತ್ರರಂಗಕ್ಕಲ್ಲ, ಸಮಾಜಕ್ಕಂಟಿದ ಪಿಡುಗು - ರಾಕಿಂಗ್ ಸ್ಟಾರ್ ಯಶ್ - Actress Ragini Dwivedi
ಯಾಕ್ ಬರೀ ಚಿತ್ರರಂಗ ಅಂತಾ ಹೇಳ್ತೀರಾ.. ಸಮಾಜದಲ್ಲಿರೋ 10 ಕ್ಷೇತ್ರದಲ್ಲಿರುವವರು ಡ್ರಗ್ಸ್ ತಗೊಳ್ತಾರೆ. ಆದರೆ, ಹೆಚ್ಚು ಹೈಲೆಟ್ ಆಗೋದು ಮಾತ್ರ ಚಿತ್ರರಂಗ..
ನಿಮ್ಮ ದೇಹ ನಿಮ್ಮದಲ್ಲ ನಿಮ್ಮ ಪೋಷಕರ ಸ್ವತ್ತು: ಯುವ ಪೀಳಿಗೆಗೆ ರಾಕಿಂಗ್ ಸ್ಟಾರ್ ಸಂದೇಶ
ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ಇರುವುದನ್ನು ಒಪ್ಪಿಕೊಳ್ಳಲು ಯಶ್ ನಿರಾಕರಿಸಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ಇರುವುದು ನಿಮಗೆ ಖಚಿತವಾಗಿದೆಯಾ.. ನಿಮಗೆ ಗೊತ್ತಿದ್ದ ಮೇಲೆ ಯಾಕೆ ಸುಮ್ಮನಿದ್ರಿ ಎಂದು ಮಾಧ್ಯಮಕ್ಕೇ ಪ್ರಶ್ನೆ ಮಾಡಿದ್ರು.
ಬಳಿಕ ಡ್ರಗ್ಸ್ ತಗೋಳೋರು ಯಾರೇ ಆಗಲಿ, ಅದು ನಿಮ್ಮ ದೇಹ ಅಲ್ಲ ನಿಮ್ಮ ಅಪ್ಪ ಅಮ್ಮ ನಿಮಗೆ ಧಾರೆ ಎರೆದಿರುವ ದೇಹ. ಅದನ್ನು ಹಾಳು ಮಾಡಿಕೊಳ್ಳಲು ನಿಮಗೆ ಅಧಿಕಾರ ಇಲ್ಲ. ಯುವ ಪೀಳಿಗೆ ಇಂತಹ ಚಟಗಳಿಗೆ ಬಲಿಯಾಗಬಾರದು ಎಂದು ಯುವ ಜನಾಂಗಕ್ಕೆ ಸಂದೇಶ ನೀಡಿದ್ರು ಯಶ್.