ಬೆಂಗಳೂರು :ಕೊರೊನಾ ಸೋಂಕಿತರು ಹೆಚ್ಚಾದ ಹಿನ್ನೆಲೆ ತುಮಕೂರು ರಸ್ತೆಯ ನೈಸ್ ರಸ್ತೆ ಬಳಿಯ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಿರ್ಮಿಸುತ್ತಿರುವ 10,100 ಹಾಸಿಗೆಗಳ ಆಸ್ಪತ್ರೆಯನ್ನು ಈಗಾಗಲೇ ಸಜ್ಜು ಗೊಳ್ಳಿಸಲಾಗುತ್ತಿದೆ.
ಕೋವಿಡ್ ಕೇರ್ ಸೆಂಟರ್ನಲ್ಲಿ ರೋಬೊಟ್ ಬಳಕೆ.. ಸೋಂಕಿತರ ಚಿಕಿತ್ಸೆಗೆ ಹೊಸ ಪ್ಲಾನ್!!
ಇಡೀ ದೇಶದಲ್ಲಿಯೇ ಅತಿ ದೊಡ್ಡ ಆಸ್ಪತ್ರೆ ಇದಾಗಲಿದ್ದು, ಇದೀಗ ರೋಬೋಟ್ ಡಾಕ್ಟರ್‌ನ ಪರಿಚಯಿಸಲು ಸರ್ಕಾರ ಚಿಂತನೆ ನಡೆಸಿದೆ. ರೋಬೊಟ್ ಬಳಕೆಗೆ ಚಿಂತನೆ ನಡೆದಿದ್ದು, ದೂರದಿಂದಲೇ ರೋಗಿಗಳ ಸಂಪರ್ಕ ಮಾಡಬಹುದಾಗಿದೆ..
ಇಡೀ ದೇಶದಲ್ಲಿಯೇ ಅತಿ ದೊಡ್ಡ ಆಸ್ಪತ್ರೆ ಇದಾಗಲಿದ್ದು, ಇದೀಗ ರೋಬೋಟ್ ಡಾಕ್ಟರ್‌ನ ಪರಿಚಯಿಸಲು ಸರ್ಕಾರ ಚಿಂತನೆ ನಡೆಸಿದೆ. ರೋಬೊಟ್ ಬಳಕೆಗೆ ಚಿಂತನೆ ನಡೆದಿದ್ದು, ದೂರದಿಂದಲೇ ರೋಗಿಗಳ ಸಂಪರ್ಕ ಮಾಡಬಹುದಾಗಿದೆ. ರೋಗಿಗಳೊಂದಿಗೆ ದೂರದಿಂದ ಮಾತಾಡಬಹುದು. ದೂರದಿಂದಲ್ಲೇ ಚಿಕಿತ್ಸೆಯ ಹಂತ ತಿಳಿಯಬಹುದು. ವೈದ್ಯರು ಮಾಡೋ ಕೆಲಸವನ್ನೇ ರೋಬೊಟ್ ಮಾಡಲಿದೆ.
ಹೈಕ್ವಾಲಿಟಿ ರೋಬೊಟ್ ಬಳಕೆ ಮಾಡುವ ಚಿಂತನೆ ನಡೆದಿದೆ. ಈಗಾಗಲೇ ಸಿಬ್ಬಂದಿಯ ಕೊರತೆ ಇದ್ದು, ಇವರ ಸ್ಥಾನವನ್ನು ರೋಬೊಟ್ ತುಂಬಿಸಲಿದೆ. ಕಡಿಮೆ ವೈದ್ಯರು ಇದ್ದರೂ ರೋಬೊಟ್ ಮೂಲಕ ಈ ಸಮಸ್ಯೆ ಬಗೆಹರಿಸಬಹುದು ಅಂತಾ ಜಯದೇವ ಆಸ್ಪತ್ರೆಯ ನಿರ್ದೇಶಕರು ಹಾಗೂ ಕೋವಿಡ್ ಟಾಸ್ಕ್ ಫೋರ್ಸ್ ತಂಡದ ಸದಸ್ಯರಾದ ಡಾ ಮಂಜುನಾಥ್ ತಿಳಿಸಿದ್ದಾರೆ.