ಕರ್ನಾಟಕ

karnataka

ETV Bharat / state

ದೇಶದಲ್ಲೇ ಮೊದಲ ಬಾರಿಗೆ ಕೊರೊನಾ ವಿರುದ್ಧ ಹೋರಾಡಲು ರಾಜ್ಯದಲ್ಲಿ ರೋಬೋ ಬಳಕೆಗೆ ಪರೀಕ್ಷೆ!​ - ಕೊರೋನಾ ವಾರ್ ನಲ್ಲಿ ವಾರಿಯಾರ್ಸ್ ಗೆ ನೆರವಾಗಲು ಬಂತು ರೋಬೋ

ಕೊರೊನಾ ವಿರುದ್ಧ ಹೋರಾಡುತ್ತಿರುವವರಿಗೆ ನೆರವಾಗಲು ರೋಬೋವೊಂದು ಬಂದಿದೆ. ಸದ್ಯ ಇದರ ಡೆಮೋ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ.

ಕೊರೊನಾ ವಿರುದ್ಧ ಹೋರಾಟಕ್ಕೆ ಬರುತ್ತಿದೆ ರೋಬೋಟ್​
ಕೊರೊನಾ ವಿರುದ್ಧ ಹೋರಾಟಕ್ಕೆ ಬರುತ್ತಿದೆ ರೋಬೋಟ್​

By

Published : Apr 19, 2020, 6:41 PM IST

Updated : Apr 19, 2020, 7:34 PM IST

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಏರಿಕೆ ಆಗುತ್ತಲೇ ಇದೆ. ಚಿಕಿತ್ಸೆ ನೀಡುವ ವೈದ್ಯರಿಗೂ ಆತಂಕ ಶುರುವಾಗಿದೆ.‌ ಹೀಗಾಗಿ, ಕೊರೊನಾ ವಿರುದ್ಧ ಹೋರಾಡುತ್ತಿರುವವರಿಗೆ ನೆರವಾಗಲು ರೋಬೋವೊಂದು ಬಂದಿದೆ.

ರಾಜ್ಯದಲ್ಲಿ ರೋಬೋ ಬಳಕೆಗೆ ಪರೀಕ್ಷೆ!​

ಕೊರೊನಾ ವಿರುದ್ಧದ ವಾರ್​ಗೆ ಕರ್ನಾಟಕ ಸರ್ಕಾರದ ಜೊತೆ ವಿಪ್ರೋ ಸಂಸ್ಥೆ ಕೈ ಜೋಡಿಸಿದ್ದು, ದೇಶದಲ್ಲೇ ಮೊದಲ ರೋಬೋಟ್​ ‌ಬಳಕೆ ಮಾಡಲಾಗುತ್ತಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯು ಕೊರೊನಾ ಪೀಡಿತರ ಚಿಕಿತ್ಸೆಗೆ ರೊಬೋಟ್​​ಗಳನ್ನು ಬಳಸಲು ಪ್ರಯೋಗ ನಡೆಸಿದೆ.

ಎರಡು ಮೂರು ಬಗೆಯ ರೋಬೋಟ್​ಗಳನ್ನು ಅಖಾಡಕ್ಕಿಳಿಸಲು ಪ್ರಯೋಗ ನಡೆದಿದೆ. ಕೊರೊನಾ ಪೀಡಿತರ ಜ್ವರ, ಬಿಪಿ ತಪಾಸಣೆ ನಡೆಸಬಲ್ಲ, ಐಸಿಯು ಹೊರಗಿನಿಂದಲೇ ಕೊರೊನಾ‌ ಪೀಡಿತರಿಗೆ ಸ್ಪಂದಿಸಬಲ್ಲ ಹಾಗೂ ವೈದ್ಯಕೀಯ ಸಿಬ್ಬಂದಿ ಹೇಳಿದಂತೆ ಓಡಾಡಬಲ್ಲ ರೋಬೋಟ್​ ಪ್ರಯೋಗ ನಡೆಯುತ್ತಿದೆ.

ಸದ್ಯ ರೋಗಿಗಳಿಗೆ ಊಟ, ಔಷಧ ಪೂರೈಸಬಲ್ಲ ರೋಬೋಟ್​ನ ಡೆಮೋ ಪರೀಕ್ಷೆಯು ಬೆಂಗಳೂರು ಮೆಡಿಕಲ್‌ ಕಾಲೇಜು ಸಂಶೋಧನಾ ತಂಡದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಈ ಡೆಮೋ ಪರೀಕ್ಷೆ ಯಶಸ್ವಿ ಆದರೆ ಕೊರೊನಾ ವಿರುದ್ಧದ ಯುದ್ಧದಲ್ಲಿ ರೋಬೋಗಳಿಂದಲೇ ರೋಗಿಗಳ ಆರೈಕೆ ಶುರುವಾಗಲಿದೆ.‌

Last Updated : Apr 19, 2020, 7:34 PM IST

For All Latest Updates

ABOUT THE AUTHOR

...view details