ಕರ್ನಾಟಕ

karnataka

ETV Bharat / state

12 ವರ್ಷದ ಬಾಲಕಿಗೆ ತಾಯಿಯಿಂದಲೇ ಕಿಡ್ನಿ ದಾನ : ರಾಜ್ಯದ ಮೊದಲ ರೋಬೋ ಅಸಿಸ್ಟೆಡ್ ಪೀಡಿಯಾಟ್ರಿಕ್ ಮೂಲಕ ಕಿಡ್ನಿ ಕಸಿ - ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಮೊದಲ ರೋಬೋ ಅಸಿಸ್ಟೆಡ್ ಪೀಡಿಯಾಟ್ರಿಕ್ ಮೂಲಕ ಕಿಡ್ನಿ ಕಸಿ

ಬಾಲಕಿಯ ಆರೋಗ್ಯ ಕ್ಷೀಣಿಸುತ್ತಾ ಬಂದಿತ್ತು. ತ್ವರಿತವಾಗಿ ಕಿಡ್ನಿ ಕಸಿ ಮಾಡದಿದ್ದರೆ ಬಾಲಕಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿತ್ತು. ಆದರೆ, ಕಿಡ್ನಿ ದಾನಿಗಳ ಕೊರತೆಯಿಂದ ಇದೂ ಸಹ ತಡವಾಗುತ್ತಿತ್ತು. ಈ ಸಂದರ್ಭದಲ್ಲಿ ತನ್ನ ತಾಯಿಯೇ ಕಿಡ್ನಿ ದಾನ ಮಾಡಲು ಮುಂದಾದರು..

ರಾಜ್ಯದಲ್ಲಿ ಮೊದಲ ರೋಬೋ ಅಸಿಸ್ಟೆಡ್ ಪೀಡಿಯಾಟ್ರಿಕ್ ಮೂಲಕ ಕಿಡ್ನಿ ಕಸಿ
ರಾಜ್ಯದಲ್ಲಿ ಮೊದಲ ರೋಬೋ ಅಸಿಸ್ಟೆಡ್ ಪೀಡಿಯಾಟ್ರಿಕ್ ಮೂಲಕ ಕಿಡ್ನಿ ಕಸಿ

By

Published : Feb 21, 2022, 3:10 PM IST

ಬೆಂಗಳೂರು : ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ 12 ವರ್ಷದ ಬಾಲಕಿಗೆ ತನ್ನ ತಾಯಿಯೇ ಕಿಡ್ನಿ ದಾನ ಮಾಡಿದ್ದು, ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಲಾಗಿದೆ. ಇದೇ ಮೊದಲ ಬಾರಿಗೆ ರೋಬೋ ಅಸಿಸ್ಟೆಡ್ ಪೀಡಿಯಾಟ್ರಿಕ್ ಮೂಲಕ ಕಿಡ್ನಿ ಕಸಿಯನ್ನು ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ರೋಬೋಟಿಕ್ ಸರ್ಜರಿ ಮತ್ತು ಕಸಿ ವಿಭಾಗದ ನಿರ್ದೇಶಕ ಡಾ. ಮೋಹನ್ ಕೇಶವ ಮೂರ್ತಿ, ಕಳೆದ ಒಂದು ವರ್ಷದಿಂದ ಈ ಬಾಲಕಿಯು ಕಿಡ್ನಿಯನ್ನು ವೈಫಲ್ಯ ಮಾಡುವ ಲೂಪಸ್ ನೆಫ್ರೈಟಿಸ್ ರೋಗದಿಂದ ಬಳಲುತ್ತಿದ್ದು, ಡಯಾಲಿಸಿಸ್ ಮಾಡಲಾಗುತ್ತಿತ್ತು.

ಬಾಲಕಿಯ ಆರೋಗ್ಯ ಕ್ಷೀಣಿಸುತ್ತಾ ಬಂದಿತ್ತು. ತ್ವರಿತವಾಗಿ ಕಿಡ್ನಿ ಕಸಿ ಮಾಡದಿದ್ದರೆ ಬಾಲಕಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿತ್ತು. ಆದರೆ, ಕಿಡ್ನಿ ದಾನಿಗಳ ಕೊರತೆಯಿಂದ ಇದೂ ಸಹ ತಡವಾಗುತ್ತಿತ್ತು. ಈ ಸಂದರ್ಭದಲ್ಲಿ ತನ್ನ ತಾಯಿಯೇ ಕಿಡ್ನಿ ದಾನ ಮಾಡಲು ಮುಂದಾದರು.

ಈ ವೇಳೆ ಕಾರ್ಯಪ್ರವೃತ್ತರಾದ ನಮ್ಮ ತಂಡ ಕಸಿ ನಡೆಸಲು ಮುಂದಾದೆವು. ಇದೇ ಮೊದಲ ಬಾರಿಗೆ ಫೋರ್ಟಿಸ್ ಆಸ್ಪತ್ರೆ ನೆಟ್‌ವರ್ಕ್‌ನಲ್ಲಿ ರೋಬೋಟ್ ಅಸಿಸ್ಟೆಡ್ ಪೀಡಿಯಾಟ್ರಿಕ್ ಮೂಲಕ ಕಸಿ ಮಾಡಲಾಯಿತು. ಈ ಚಿಕಿತ್ಸಾ ವಿಧಾನವು ರೋಬೋಟಿಕ್‌ನಿಂದ ಕೂಡಿರುವುದರಿಂದ ಹೈ ಟೆಕ್ನಾಲಜಿಯನ್ನು ಬಳಸಲಾಗಿದೆ.

ಕಸಿ ಸಂದರ್ಭದಲ್ಲಾಗಲಿ ಅಥವಾ ನಂತರದಲ್ಲಿ ಆಗುವ ನೋವನ್ನು ಕಡಿಮೆಗೊಳಿಸುತ್ತದೆ. ಚಿಕಿತ್ಸೆ ಬಳಿಕ ಬಾಲಕಿ ಸಂಪೂರ್ಣ ಗುಣಮುಖರಾಗಿದ್ದಾರೆ. ಕಳೆದ ಒಂದು ವರ್ಷದಿಂದ ವೀಲ್‌ಚೇರ್‌ ಅವಲಂಬಿಸಿದ್ದ ಮಗು ಇದೀಗ ಚೇತರಿಸಿಕೊಂಡಿದೆ. ತಾಯಿಯೂ ಸಹ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ : ಮೈಸೂರು ಅರಮನೆಗೆ ವಿಶ್ವ ಮನ್ನಣೆ: ಟಾಪ್ 20 ಗೂಗಲ್ ರಿವ್ಯೂವ್​ ಪಟ್ಟಿಯಲ್ಲಿ 15ನೇ ಸ್ಥಾನ

ABOUT THE AUTHOR

...view details