ಬೆಂಗಳೂರು: ಬಿಟ್ ಕಾಯಿನ್ ದಂಧೆ (Bitcoin Scam) ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಗರಣದ ಕೇಂದ್ರ ಬಿಂದುವಾಗಿರುವ ಶ್ರೀಕೃಷ್ಣ, ವೆಬ್ ಸೈಟ್ ಹ್ಯಾಕ್ ಮಾಡಿ ಬಿಟ್ ಕಾಯಿನ್ ವಹಿವಾಟು ಹೇಗೆ ನಡೆಸುತ್ತಿದ್ದ ಎಂಬುದರ ಸ್ಫೋಟಕ ಸತ್ಯ ಬಹಿರಂಗವಾಗಿದೆ.
ಐದು ವರ್ಷಗಳ ಕಾಲ ಬಿಟ್ ಕಾಯಿನ್ ದಂಧೆಯಲ್ಲಿ ಭಾಗಿಯಾಗಿ, ಇದೀಗ ಸಿಸಿಬಿ ಪೊಲೀಸರಿಂದ ಬಂಧಿತನಾಗಿರುವ ಪ್ರಕರಣದ ಎರಡನೇ ಆರೋಪಿ ರಾಬಿನ್ ಖಂಡೇನ್ ವಾಲe (Robin Khanden Wala), ಶ್ರೀಕಿಯ (shriki) ದಂಧೆಯ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.
ಹ್ಯಾಕಿಂಗ್ ಹೇಗೆ ಮಾಡುತ್ತಿದ್ದ? ಯಾರಿಗೆಲ್ಲಾ ಮಾರಾಟ ಮಾಡುತ್ತಿದ್ದ?. ಈ ದಂಧೆಯಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ? ಎಂಬುದರ ಬಗ್ಗೆ ಸವಿಸ್ತಾರವಾಗಿ ತನಿಖಾಧಿಕಾರಿಗಳ ಮುಂದೆ ಏಳು ಪುಟಗಳ ಹೇಳಿಕೆ ನೀಡಿದ್ದಾನೆ ರಾಬಿನ್. ಅದರ ಪ್ರತಿ ಈಟಿವಿ ಭಾರತಕ್ಕೆಗೆ ಲಭ್ಯವಾಗಿದೆ.
50 ಕೋಟಿ ರೂ.ಬಿಟ್ ಕಾಯಿನ್ ವ್ಯವಹಾರ :ಪಶ್ಚಿಮ ಬಂಗಾಳ ಮೂಲದ ರಾಬಿನ್ ಖಂಡೇನ್ ವಾಲಾ ಸಿಎ ವ್ಯಾಸಂಗ ಮಾಡಿದ್ದಾನೆ. 2012ರಿಂದ 16 ರವರೆಗೆ ತಂದೆ ನಡೆಸುತ್ತಿದ್ದ ರೈಸ್ ಮಿಲ್ ನೋಡಿಕೊಳ್ಳುತ್ತಿದ್ದ. 2016ರಲ್ಲಿ ಬ್ಯುಸಿನೆಸ್ ಮಾಡುವ ಉದ್ದೇಶದಿಂದ ರಾಬಿನ್ ಸರ್ವೀಸಸ್ ಹೆಸರಿನಲ್ಲಿ ಬಿಟ್ ಕಾಯಿನ್ ವ್ಯವಹಾರ ಆರಂಭಿಸಿದ್ದ. ಲೋಕಲ್ ಬಿಟ್ ಕಾಯಿನ್ ಡಾಟ್ ಕಾಮ್, paxfull, remitano.com, binance.com ಸೇರಿದಂತೆ ವಿವಿಧ ವೆಬ್‌ಸೈಟ್‌ಗಳಲ್ಲಿ ಬಿಟ್ ಕಾಯಿನ್ ವ್ಯವಹಾರ ಆರಂಭಿಸಿದ್ದ. ಇದಕ್ಕೆ ಪ್ರತಿಯಾಗಿ ಶೇ.2ರಷ್ಟು ಕಮಿಷನ್ ಪಡೆಯುತ್ತಿದ್ದ. ಇದುವರೆಗೆ ₹50 ಕೋಟಿ ವ್ಯವಹಾರ ಮಾಡಿರುವುದು ತಿಳಿದು ಬಂದಿದೆ.
ಹ್ಯಾಕರ್ ಶ್ರೀಕಿ ಪರಿಚಯವಾಗಿದ್ದು ಹೇಗೆ? :2017ರಲ್ಲಿ ಏಪ್ರಿಲ್ನಲ್ಲಿ ಲೋಕಲ್ ಬಿಟ್ ಕಾಯಿನ್ ಡಾಟ್ ಕಾಮ್ನಲ್ಲಿ ಖಂಡೇನ್ ವಾಲಾಗೆ ಹ್ಯಾಕರ್ ಶ್ರೀಕೃಷ್ಣ ಪರಿಚಯಿಸಿಕೊಂಡಿದ್ದಾನೆ. ಇಬ್ಬರು ಹಾಗೆಯೇ ಚಾಟ್ ಮಾಡಿಕೊಂಡಿದ್ದಾರೆ. ಈ ವೇಳೆ ಶ್ರೀಕೃಷ್ಣ 900 ಬಿಟ್ ಕಾಯಿನ್ಗಳಿದ್ದು ಮಾರಾಟ ಮಾಡಲು ಮಾಡುವಂತೆ ತಿಳಿಸಿದ್ದಾನೆ. ಇದಕ್ಕೆ ಒಪ್ಪಿಕೊಂಡ ಖಂಡೇನ್, ಬಿಟ್ ಕಾಯಿನ್ ಪಡೆದು ಮಾರಾಟ ಮಾಡಿ, ಅದರಿಂದ ಬಂದ ಹಣವನ್ನ ಶ್ರೀಕಿ ಹೇಳಿದ ಬ್ಯಾಂಕ್ ಖಾತೆಗೆ ಹಾಕುತ್ತಿದ್ದ ಎನ್ನಲಾಗಿದೆ. ಹೀಗೆ ಸುಮಾರು ಐದಾರು ಕೋಟಿ ರೂ. ವ್ಯವಹಾರ ನಡೆಸಿರುವುದಾಗಿಯೂ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾನೆ.
ಹ್ಯಾಕ್ ಮಾಡಿ ಬಂದ ಹಣದಲ್ಲಿಶ್ರೀಕಿಮೋಜು- ಮಸ್ತಿ:ಶ್ರೀಕಿ ಬಿಟ್ ಕಾಯಿನ್ ಅಷ್ಟೇ ಅಲ್ಲದೆ, ಗೋವಾದಲ್ಲಿ ಪೋಕರ್ ಆಲ್‌ಲೈನ್ ಗೇಮ್ ಸಹ ಹ್ಯಾಕ್ ಮಾಡಿರುವುದು ರಾಬಿನ್ ತನಿಖೆ ವೇಳೆ ಬಯಲಾಗಿದೆ. ಪೋಕರ್ ಗೇಮ್ ಹ್ಯಾಕ್ ಮಾಡಿ ಕೋಟಿ ಕೋಟಿ ಹಣ ಎಗರಿಸಿದ್ದ ಶ್ರೀಕಿ, ಗೋವಾದಲ್ಲಿ ಮೋಜು-ಮಸ್ತಿ ಮಾಡ್ತಿದ್ದನಂತೆ. 2017ರಿಂದಲೂ ಹಲವು ವೆಬ್‌ಸೈಟ್ ಹ್ಯಾಕ್ ಮಾಡ್ತಿದ್ದ ಶ್ರೀಕಿ, 130 ಬಿಟ್ ಕಾಯಿನ್ಗಳನ್ನು ರಾಬಿನ್ಗೆ ನೀಡಿದ್ದ.