ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೋಡ್ ರಾಬರಿಗಳ ಹಾವಳಿ ಮತ್ತೆ ಮರುಕಳಿಸಿದೆ. ಬೆಳ್ಳಂಬೆಳಗ್ಗೆಯೇ ಕಿಡಿಗೇಡಿಗಳು ರೋಡ್ನಲ್ಲಿ ಸಿಕ್ಕಸಿಕ್ಕವರಿಗೆ ಮಚ್ಚು ತೋರಿಸಿ ದುಡ್ಡು ಕಿತ್ತುಕೊಳ್ಳುವ ಘಟನೆ ದೊಮ್ಮಲೂರಿನ ಬಳಿ ನಡೆದಿದೆ.
ಬೆಂಗಳೂರಲ್ಲಿ ಮಚ್ಚು ತೋರಿಸಿ ದುಡ್ಡು ಕಿತ್ತ ಖದೀಮ... ಸಿಸಿಟಿವಿಯಲ್ಲಿ ದೃಶ್ಯ ಸೆರೆ - Midnight robbery in Bengaluru
ಸಿಲಿಕಾನ್ ಸಿಟಿಯಲ್ಲಿ ಇಷ್ಟು ದಿನ ಮಧ್ಯರಾತ್ರಿ ನಡೆಯುತ್ತಿದ್ದ ದರೋಡೆ ಇದೀಗ ಬೆಳ್ಳಂಬೆಳಗ್ಗೆಯೇ ಪ್ರಾರಂಭವಾಗಿದ್ದು, ಮಚ್ಚು ತೋರಿಸಿ ದುಡ್ಡು ಕಿತ್ತುಕೊಳ್ಳುತ್ತಿರುವ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
![ಬೆಂಗಳೂರಲ್ಲಿ ಮಚ್ಚು ತೋರಿಸಿ ದುಡ್ಡು ಕಿತ್ತ ಖದೀಮ... ಸಿಸಿಟಿವಿಯಲ್ಲಿ ದೃಶ್ಯ ಸೆರೆ CCTv footage](https://etvbharatimages.akamaized.net/etvbharat/prod-images/768-512-5856415-thumbnail-3x2-vicky.jpg)
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
ಸ್ವಿಗ್ಗಿ ಡೆಲಿವರಿ ಬಾಯ್ ಬೆಳಗಿನ ಜಾವ ನಾಲ್ಕು ಮೂವತ್ತರ ಸುಮಾರಿಗೆ ಬೈಕ್ನಲ್ಲಿ ತೆರಳುತ್ತಿದ್ದ ಸಮಯದಲ್ಲಿ ವ್ಯಕ್ತಿಯೋರ್ವ ಆತನನ್ನು ಅಡ್ಡಗಟ್ಟಿ ಮಚ್ಚು ಝಳಪಿಸಿ ದುಡ್ಡು ಕಿತ್ತುಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
ಇಷ್ಟು ದಿನ ಮಧ್ಯರಾತ್ರಿ ಈ ರೀತಿಯ ಘಟನೆಗಳು ನಡೆಯುತ್ತಿದ್ದವು. ಆದರೆ ಈಗ ಬೆಳಗಿನ ಜಾವ ಈ ರೀತಿ ಘಟನೆ ನಡೆಯುತ್ತಿರುವುದು ಸಿಲಿಕಾನ್ ಸಿಟಿ ಜನರಲ್ಲಿ ಆತಂಕ ಸೃಷ್ಟಿಸಿದೆ. ಸದ್ಯ ಸಂಬಂಧಿಸಿದ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಆರೋಪಿ ಪತ್ತೆಗೆ ಮುಂದಾಗಿದ್ದಾರೆ.
Last Updated : Jan 27, 2020, 1:11 PM IST