ಕರ್ನಾಟಕ

karnataka

ETV Bharat / state

ವಾಟ್ಸಪ್​​ ವಿಡಿಯೋ ಕಾಲ್​ನಲ್ಲೇ ಸ್ಕೆಚ್​ ಹಾಕಿ ದರೋಡೆ: ಓರ್ವನ ಬಂಧನ - ವಾಟ್ಸಾಪ್​ ವಿಡಿಯೋ ಕಾಲ್ ಬಳಸಿ ದರೋಡೆ: ಓರ್ವನ ಬಂಧನ

ವಾಟ್ಸಪ್ ವಿಡಿಯೋ ಕಾಲ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.

Robbery Using WhatsApp Video Call
ಮಹಮ್ಮದ್ ಫೈಸಲ್  ಬಂಧಿತ ಆರೋಪಿ

By

Published : Jan 28, 2020, 12:16 PM IST

ಬೆಂಗಳೂರು: ವಾಟ್ಸಪ್ ವಿಡಿಯೋ ಕಾಲ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.

ವಾಟ್ಸಪ್​ ವಿಡಿಯೋ ಕಾಲ್ ಬಳಸಿ ದರೋಡೆ

ನಾಗವಾರ ನಿವಾಸಿ ಮಹಮ್ಮದ್ ಫೈಸಲ್ (23) ಬಂಧಿತ ಆರೋಪಿ. ಲೈವ್ ಬ್ಯಾಂಡ್ ಶೋಕಿಗೆ ಬಿದ್ದಿದ್ದ ಫೈಸಲ್, ಮೊದಲಿಗೆ ತಡರಾತ್ರಿ ಕಳ್ಳತನ ಮಾಡುವ ಜಾಗಕ್ಕೆ ಹೋಗಿ ಸ್ನೇಹಿತ ವಿಕ್ರಮ್​ ಎಂಬಾತನಿಗೆ ವಿಡಿಯೋ ಕಾಲ್ ಮಾಡುತ್ತಿದ್ದನಂತೆ. ಅಂಗಡಿ ಮುಂಭಾಗದಲ್ಲಿ ಯಾವ ರೀತಿಯ ಬೀಗ ಇದೆ. ಅಂಗಡಿಯಲ್ಲಿ ಹೇಗೆ ಕಳ್ಳತನ ಮಾಡಬೇಕು, ಎಲ್ಲಿ ಏನೇನು ಇರುತ್ತೆ ಅನ್ನೋದನ್ನು ವಿಡಿಯೋ ಕಾಲ್ ಮೂಲಕ ಸ್ನೇಹಿತ ವಿಕ್ರಮ್‍ಗೆ ತೋರಿಸುತ್ತಿದ್ದ. ನಂತರ ವಿಕ್ರಮ್ ನೀಡುವ ಸೂಚನೆಯಂತೆ ಬೀಗ ಒಡೆದು, ಅಂಗಡಿಗೆ ನುಗ್ಗಿ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ.

ಸಿಸಿಟಿವಿ ಆಧಾರದ ಮೇಲೆ ಅಶೋಕನಗರ ಪೊಲೀಸರು ಆರೋಪಿ ಫೈಸಲ್‍ನನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಬ್ರ್ಯಾಂಡೆಡ್ ವಾಚ್​ಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details