ಬೆಂಗಳೂರು: ಮುಂಜಾನೆ ವ್ಯಕ್ತಿಯೊಬ್ಬರು ತಮ್ಮ ದ್ವಿಚಕ್ರ ವಾಹನದಲ್ಲಿ ಹೂ ತರಲು ನಗರದ ಮಾರ್ಕೆಟ್ಗೆ ಹೊಗುತ್ತಿರುವಾಗ ಏಕಾಏಕಿ ಹಿಂಬದಿಯಿಂದ ಬಂದ ಮೂವರು ಹಗಲು ದರೋಡೆಕೋರರು ವ್ಯಕ್ತಿಯನ್ನು ನಿಲ್ಲಿಸಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಆತನ ಬಳಿಯಿದ್ದ ಮೊಬೈಲ್ ಹಾಗೂ ನಾಲ್ಕು ಸಾವಿರ ರೂ. ನಗದನ್ನ ದೋಚಿ ಪರಾರಿಯಾಗಿದ್ದರು.
ಹಲ್ಲೆಗೊಳಗಾದ ವ್ಯಕ್ತಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳಾದ ಶಂಕರ್ ಅಲಿಯಾಸ್ ತಮಿಳ್ ಹಾಗೂ ಶಂಕರ್ ಅಲಿಯಾಸ್ ತಿರುಪತಿ ಎಂಬುವವರನ್ನ ಬಂಧಿಸಿದ್ದಾರೆ.