ಬೆಂಗಳೂರು:ಕಿವಿ ಕೇಳದ, ಮಾತು ಬಾರದ ಸ್ವಂತ ಅಕ್ಕನ ಮನೆಗೇ ಕನ್ನ ಹಾಕಿದ ತಂಗಿಯನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಅಕ್ಕನ ಮನೆಗೇ ಕನ್ನ ಹಾಕಿದ ತಂಗಿ! - Robbery news
ಅಕ್ಕನ ಮನೆಯಲ್ಲಿ ಚಿನ್ನಾಭರಣ ಕದ್ದಿದ್ದ ತಂಗಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರತಿ ಬಾರಿ ಮನೆಯಲ್ಲಿ ಅಕ್ಕ ಮೀನಾ ಮಲಗುವಾಗ ಬೀರುವಿನ ಬೀಗವನ್ನ ತಲೆದಿಂಬಿನ ಕೆಳಗಿಟ್ಟುಕೊಂಡು ಮಲಗುತ್ತಿದ್ದಳು. ಇನ್ನು ತಂಗಿ ಶಶಿಕಲಾ, ಮೀನಾ ವಾಸವಿದ್ದ ಮನೆಯ ಮೊದಲನೇ ಮಹಡಿಯಲ್ಲಿ ವಾಸವಾಗಿದ್ದಳು. ಇದನ್ನ ಗಮನಿಸಿದ್ದ ತಂಗಿ ಶಶಿಕಲಾ, ಮೀನಾ ಮಲಗಿದ್ದಾಗ ಕೀ ತೆಗೆದುಕೊಂಡು ಮನೆಯಲ್ಲಿದ್ದ ಚಿನ್ನದ ಒಡೆವೆಗಳನ್ನ ದೋಚಿದ್ದಾಳೆ.
ಕೆಲವು ದಿನಗಳ ನಂತರ ಮೀನಾ ಅಜ್ಜಿಯ ಮನೆಗೆ ತೆರಳಲು ಬೀರು ತೆಗೆದಾಗ ಬಂಗಾರ ಕಾಣೆಯಾಗಿರುವುದು ಬೆಳೆಕಿಗೆ ಬಂದಿದೆ. ಕೂಡಲೇ ನಂದಿನಿ ಲೇಔಟ್‌ನ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಇನ್ನು ಪೊಲೀಸರು ಈಕೆಯನ್ನ ವಿಚಾರಿಸಿದಾಗ ಕಳ್ಳತನ ಮಾಡಿರುವುದು ಬೆಳಕಿದೆ ಬಂದಿದೆ. ಇನ್ನು ಆರೋಪಿಯಿಂದ 9 ಲಕ್ಷ ರೂ. ಮೌಲ್ಯದ 224 ಗ್ರಾಂ ಚಿನ್ನಾಭರಣವನ್ನ ವಶಕ್ಕೆ ಪಡೆಯಲಾಗಿದೆ.