ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಲಾಂಗು, ಮಚ್ಚು ತೋರಿಸಿ ದರೋಡೆ! - ಬೆಂಗಳೂರು ದರೋಡೆ ಪ್ರಕರಣ

ಮಂಜುನಾಥ್ ಎಂಬುವರ ಅಂಗಡಿಗೆ ನುಗ್ಗಿ ಕಳ್ಳತನಕ್ಕೆ ಯತ್ನ ನಡೆಸಲಾಗಿದೆ. ಕತ್ತಿ ಕಸಿದು ದರೋಡೆಕೋರರ ಜತೆ ಮಂಜುನಾಥ್ ಎನ್ನುವರು ಜಗಳ ಮಾಡಿದ್ದಾರೆ. ಅದೇ ರೀತಿ ಇಮ್ರಾನ್, ಅರವಿಂದ್ ಎಂಬುವರ ಅಂಗಡಿ ಬಳಿಯೂ ಕೃತ್ಯಕ್ಕೆ ಚಾಕು ತೋರಿಸಿ ರಾಬರಿ ಯತ್ನ ನಡೆದಿದೆ..

Robbery at bangalore
ಬೆಂಗಳೂರಲ್ಲಿ ದರೋಡೆ

By

Published : Jun 29, 2021, 9:11 PM IST

Updated : Jun 29, 2021, 9:54 PM IST

ಬೆಂಗಳೂರು :ಬೆಳ್ಳಂಬೆಳಗ್ಗೆ ಸರಣಿ ರಾಬರಿ, ದರೋಡೆಗೆ ಕೈ ಹಾಕುತ್ತೆ ಈ ಖತರ್ನಾಕ್​ ಗ್ಯಾಂಗ್​​. ರಾಜಧಾನಿಯ ವಸಂತನಗರದ 4ನೇ ಮುಖ್ಯ ರಸ್ತೆಯಲ್ಲಿ ಇಂದು ದರೋಡೆ ನಡೆದಿದೆ.

ಬೆಳಗ್ಗೆ ಸುಮಾರು 5 ಗಂಟೆಯ ಸಮಯದಲ್ಲಿ ಮಿಲ್ಕ್ ಶಾಪ್​ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ, ದರೋಡೆ ನಡೆಸಲಾಗುತ್ತಿದೆ. ಲಾಂಗ್, ಕತ್ತಿ ತೋರಿಸಿ ಹಣ ದರೋಡೆಗೆ ಯತ್ನಿಸಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದ ಎರಡ್ಮೂರು ತಿಂಗಳಿಂದ ಒಂದೇ ಏರಿಯಾದಲ್ಲಿ ಐದಾರು ಬಾರಿ ಇಂತಹ ಕೃತ್ಯಕ್ಕೆ ಕೈ ಹಾಕಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ದರೋಡೆ ಕುರಿತು ಅಂಗಡಿ ಮಾಲೀಕ ಮಂಜುನಾಥ್​ ಪ್ರತಿಕ್ರಿಯೆ

ಹಾಲಿನ ಅಂಗಡಿಗೆ ನುಗ್ಗಿ ಹಣ ಕಸಿದು ಪರಾರಿ ಆಗಿರುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಡಿಯೋ ಬೈಕ್​ನಲ್ಲಿ ಬಂದಿದ್ದ ಇಬ್ಬರಿಂದ ಕೃತ್ಯ ನೆಡೆದಿದೆ. ಕುತ್ತಿಗೆಗೆ ಮಚ್ಚು ಇಟ್ಟು ರಾಬರ್ಸ್ ಹಣ ಕಿತ್ತಿದ್ದಾರೆ.

ಇದನ್ನೂ ಓದಿ:ಮನ್‌ಮುಲ್‌ನಲ್ಲಿ ₹10 ಸಾವಿರ ಕೋಟಿಗೂ ಹೆಚ್ಚಿನ ಹಗರಣ ನಡೆದಿದೆ : ಎಲ್.ಆರ್. ಶಿವರಾಮೇಗೌಡ

ಮಂಜುನಾಥ್ ಎಂಬುವರ ಅಂಗಡಿಗೆ ನುಗ್ಗಿ ಕಳ್ಳತನಕ್ಕೆ ಯತ್ನ ನಡೆಸಲಾಗಿದೆ. ಕತ್ತಿ ಕಸಿದು ದರೋಡೆಕೋರರ ಜತೆ ಮಂಜುನಾಥ್ ಎನ್ನುವರು ಜಗಳ ಮಾಡಿದ್ದಾರೆ. ಅದೇ ರೀತಿ ಇಮ್ರಾನ್, ಅರವಿಂದ್ ಎಂಬುವರ ಅಂಗಡಿ ಬಳಿಯೂ ಕೃತ್ಯಕ್ಕೆ ಚಾಕು ತೋರಿಸಿ ರಾಬರಿ ಯತ್ನ ನಡೆದಿದೆ.

ಆರೋಪಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೌಂಡ್ ಅಪ್ ಮಾಡಲು ನಗರ ಪೊಲೀಸರು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Last Updated : Jun 29, 2021, 9:54 PM IST

ABOUT THE AUTHOR

...view details