ಬೆಂಗಳೂರು: ತನ್ನ ಮೊಬೈಲ್ ಕಸಿಯಲು ಬಂದ ಖದೀಮರ ಜೊತೆ ಹೊಡೆದಾಡಿದ ಮಂಡ್ಯ ಮೂಲದ ಯೋಧನನ್ನು ಚಲಿಸುವ ರೈಲಿನಿಂದ ದರೋಡೆಕೋರರು ತಳ್ಳಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ವರದಿಯಾಗಿದ್ದು, ಯೋಧ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.
ಮೊಬೈಲ್ ಕಳ್ಳರನ್ನು ತಡೆದ ಮಂಡ್ಯ ಯೋಧನನ್ನು ರೈಲಿನಿಂದ ತಳ್ಳಿದ ದರೋಡೆಕೋರರು! - Mandya jawan
ಮೊಬೈಲ್ ಕಸಿಯಲು ಬಂದ ಖದೀಮರ ಜೊತೆ ಹೊಡೆದಾಡಿದ ಮಂಡ್ಯ ಮೂಲದ ಯೋಧನನ್ನು ಚಲಿಸುವ ರೈಲಿನಿಂದ ಕಳ್ಳರು ಕೆಳಗೆ ತಳ್ಳಿರುವ ಘಟನೆ ನಡೆದಿದೆ.
ಮಂಡ್ಯ ಮೂಲದ ಯೋಧ ಮಾದೇಗೌಡ ಅವರ ತಲೆ ಭಾಗಕ್ಕೆ ಗಾಯಗಳಾಗಿದ್ದು ಸದ್ಯ ಚಿಕಿತ್ಸೆ ಮುಂದುವರಿಯುತ್ತಿದೆ. ಪಂಜಾಬ್ನ ಭತಿಂಡದಲ್ಲಿ ಸೇವೆ ಸಲ್ಲಿಸುತ್ತಿರುವ ಮಾದೇ ಗೌಡ ಅವರು ಪತ್ನಿ ದೀಪಾ ಮತ್ತು ಮಗುವಿನೊಂದಿಗೆ ಮಂಡ್ಯಕ್ಕೆ ಬರುತ್ತಿದ್ದರು. ನಾಯಂಡನ ಹಳ್ಳಿ ಬಳಿ ಅವರು ಟಾಯ್ಲೆಟ್ಗೆ ಹೋಗುವಾಗ, ಹಿಂದಿನಿಂದ ಬಂದ ದರೋಡೆಕೋರರು ಅವರ ಮೊಬೈಲ್ ಕಸಿಯಲು ಯತ್ನಿಸಿದರು. ಈ ವೇಳೆ ಅವರು ಖದೀಮರೊಂದಿಗೆ ಕೈ ಕೈ ಮಿಲಾಯಿಸಿದ್ದು, ಎಲ್ಲರೂ ಸೇರಿ ಮಾದೇ ಗೌಡ ಅವರನ್ನು ಚಲಿಸುವ ರೈಲಿನಿಂದ ಕೆಳಗೆ ಎಸೆದಿದ್ದಾರೆ ಎಂದು ತಿಳಿದುಬಂದಿದೆ.
ತಕ್ಷಣವೇ ಮಾದೇಗೌಡ ಅವರ ಪತ್ನಿ ತುರ್ತು ಸರಪಳಿ ಎಳೆದು ರೈಲನ್ನು ನಿಲ್ಲಿಸಿದ್ದು, ಯೋಧನಿಗೆ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ರೈಲು ನಿಲ್ದಾಣ ಪೊಲೀಸರಿಗೆ ಯೋಧನ ಪತ್ನಿ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ, ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಜಿಆರ್ಪಿ ಪೊಲೀಸರು ತಿಳಿಸಿದ್ದಾರೆ.