ಕರ್ನಾಟಕ

karnataka

ETV Bharat / state

ಹೊಸ ವರ್ಷಾಚರಣೆಗೆ ಮುನ್ನೆಚ್ಚರಿಕೆ: 44 ಮೇಲ್ಸೇತುವೆಗಳಲ್ಲಿ ವಾಹನ ಸಂಚಾರ ಬಂದ್ - ಬೆಂಗಳೂರು ಸುದ್ದಿ ಫ್ಲೈ ಓವರ್​ಗಳಲ್ಲಿ‌ ರಸ್ತೆ ಸಂಚಾರ ಬಂದ್

ಹೊಸ ವರ್ಷ ಹಿನ್ನೆಲೆಯಲ್ಲಿ‌ ರಸ್ತೆ ಅಪಘಾತ ತಪ್ಪಿಸುವ ಸಲುವಾಗಿ ಇಂದು ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೂ ರಾಜಧಾನಿಯಲ್ಲಿರುವ 44 ರಸ್ತೆ‌ ಮೇಲ್ಸೇತುವೆಗಳಲ್ಲಿ ನಗರ ಟ್ರಾಫಿಕ್‌ ಪೊಲೀಸರು ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ.

banglore
ಫ್ಲೈ ಓವರ್​ಗಳಲ್ಲಿ‌ ರಸ್ತೆ ಸಂಚಾರ ಬಂದ್

By

Published : Dec 31, 2019, 12:02 PM IST

ಬೆಂಗಳೂರು:ಹೊಸ ವರ್ಷ ಹಿನ್ನೆಲೆಯಲ್ಲಿ‌ ರಸ್ತೆ ಅಪಘಾತ ತಪ್ಪಿಸುವ ಸಲುವಾಗಿ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೂ ರಾಜಧಾನಿಯಲ್ಲಿರುವ 44 ರಸ್ತೆ‌ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.‌

ಹೊಸ ವರ್ಷದ ಹುರುಪಿನಲ್ಲಿ ಮದ್ಯ ಸೇವಿಸಿ ವೇಗವಾಗಿ ವಾಹನ ಚಲಾಯಿಸಿ ರಸ್ತೆ ಅಪಘಾತವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಸವಾರರ ಸುರಕ್ಷತೆ ದೃಷ್ಠಿಯಿಂದ 44 ಫ್ಲೈಓವರ್ ಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಈ ಕೆಳಗಿನ ಫ್ಲೆ ಓವರ್​ಗಳಲ್ಲಿ ವಾಹನ‌ ಸಂಚಾರ ಬಂದ್:
ಹೊಸೂರು ಎಲಿವೇಟೆಡ್ ಮೇಲ್ಸೇತುವೆ, ಜಯದೇವ ಮೇಲ್ಸೇತುವೆ, ಬೆಂಗಳೂರು ಡೈರಿ ಸರ್ಕಲ್ ದೇವನ ಬೀಸನಹಳ್ಳಿ, ಕಾಡುಗೋಡಿ ಮೇಲ್ಸೇತುವೆ, ಓ ಫಾರಂ, ಸರ್ಜಾಪುರ ಮುಖ್ಯರಸ್ತೆ, ಅಗರ ಮೇಲ್ಸೇತುವೆ, ಇಬ್ಬಲೂರು ಮೇಲ್ಸೇತುವೆ, ಬೆಳ್ಳಂದೂರು, ಇಂದಿರಾನಗರ 100 ಅಡಿ ರಸ್ತೆ, ದೊಡ್ಡನೆಕ್ಕುಂದಿ, ಮೇಡಹಳ್ಳಿ, ಲಿಂಗರಾಜಪುರ, ಕಲ್ಯಾಣನಗರ, ನಾಗವಾರ, ಹೆಣ್ಣೂರು, ರಿಚ್ಮಂಡ್ ರಸ್ತೆ, ಆನಂದರಾವ್ ಸರ್ಕಲ್, ಮೈಸೂರು ರಸ್ತೆ, ಪಶ್ಚಿಮ ಕಾರ್ಡ್ ರಸ್ತೆ, ತುಮಕೂರು ರೋಡ್, ಸಿ.ವಿ. ರಾಮನ್ ರೋಡ್, ಬಳ್ಳಾರಿ ರಸ್ತೆಯ ಸಿಬಿಐ ಹಾಗೂ ಹುಣಸೆಮಾರನಹಳ್ಳಿ ಮೇಲ್ಸೇತುವೆಗಳಲ್ಲಿ ತಾತ್ಕಾಲಿಕವಾಗಿ ರಸ್ತೆ ಸಂಚಾರ ಬಂದ್ ಮಾಡಲಾಗಿದೆ.

ದ್ವಿಚಕ್ರ ವಾಹನ ಸವಾರರಿಗೆ ಸರ್ವೀಸ್ ರಸ್ತೆಗಳಲ್ಲಿ ಸಂಚರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

For All Latest Updates

ABOUT THE AUTHOR

...view details