ಬೆಂಗಳೂರು : ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಮತ್ತು ಸರ್ಜಿಕಲ್ಸ್ ಸೊಸೈಟಿ ಬೆಂಗಳೂರು ತನ್ನ 50 ವರ್ಷ ಸಂಭ್ರಮಾಚರಣೆಯ ಪ್ರಯುಕ್ತ ಹಳೆಯ ಮತ್ತು ನೂತನ 200 ಕಾರುಗಳ ಜಾಥ ಕಾರ್ಯಕ್ರಮ ನಡೆಸಿತು. ವಿಧಾನಸೌಧದ ಮುಂಬಾಗದಿಂದ ನಂದಿಬೆಟ್ಟ ದವರಗೆ 44ಕಿಲೋ ಮೀಟರ್ ವರೆಗೆ ಕಾರುಗಳ ಜಾಥ ಇದಾಗಿತ್ತು.
ಜಾಥ ಉದ್ಘಾಟಿಸಿ ಮಾತನಾಡಿದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಎಂ ಎ ಸಲೀಂ ಅವರು, ದೇವರನ್ನು ನಾವು ನೋಡಿಲ್ಲ. ಸರ್ಜನ್ಸ್ಗಳು ಕಣ್ಣು ಮುಂದೆ ಕಾಣುವ ಭಗವಂತನ ಅವತಾರ. ಜನರ ಜೀವ ಉಳಿಸುತ್ತಾರೆ. ವೈದ್ಯರು ಜೊತೆಯಲ್ಲಿ ಸರ್ಜನ್ಸ್ ಕಾರ್ಯನಿರ್ವಹಣೆ ಅತ್ಯಂತ ಕಷ್ಟಕರ. ಒಬ್ಬರು ಪ್ರಾಣ ಉಳಿಸಲು ಸಾಕಷ್ಟು ಶ್ರಮವಹಿಸುತ್ತಾರೆ ಎಂದು ಹೇಳಿದರು.
ರಸ್ತೆಗಳಲ್ಲಿ ರಸ್ತೆ ಅಪಘಾತದಿಂದ ಲಕ್ಷಾಂತರ ಜನರ ಜೀವ ಕಳೆದುಕೊಳ್ಳುತ್ತಾರೆ. ಅದರಲ್ಲಿ ಬದುಕಿದವರು ಅಂಗಾಂಗ ನ್ಯೂನತೆಯಿಂದ ಜೀವನಪೂರ್ತಿ ನರಳುತ್ತಾರೆ. ಅಪಘಾತಗಳು ಹೆಲ್ ಮೇಟ್ ಧರಸಿದೆ ಇರುವುದು. ಅತಿ ವೇಗದ ಚಾಲನೆ ಮತ್ತು ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಹಾಗೂ ಸೀಟ್ ಬೆಲ್ಟ್ ಧರಿಸದೇ ಇರುವುದು ಇವುಗಳಿಂದ ರಸ್ತೆ ಅಪಘಾತವಾಗುತ್ತಿದೆ. 1 ಲಕ್ಷ 50ಸಾವಿರ ಜನರು ಪ್ರತಿವರ್ಷ ವಾಹನ ಅಪಘಾತದಿಂದ ಮರಣ ಹೊಂದುತ್ತಾರೆ ಮತ್ತು 6 ಲಕ್ಷ ಜನರು ಅಪಘಾತದಿಂದ ದೇಹಕ್ಕಾದ ಗಂಭೀರ ಗಾಯದಿಂದ ನರಳುತ್ತಾರೆ. ಆದ್ದರಿಂದ ಸಾರ್ವಜನಿಕರು ವಾಹನಗಳನ್ನು ಸುರಕ್ಷತೆಯಿಂದ ಚಾಲನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಬೆಂಗಳೂರು ಸರ್ಜಿಕಲ್ಸ್ ಸೊಸೈಟಿ ಅಧ್ಯಕ್ಷ ಡಾ.ವೆಂಕಟೇಶ್ ಅವರು ಮಾತನಾಡಿ, ಸರ್ಜಿಕಲ್ಸ್ ಸೊಸೈಟಿ ಬೆಂಗಳೂರು 50ವರ್ಷದ ಸಂಭ್ರಮಾಚರಣೆ ಪ್ರಯುಕ್ತ ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಂಡಿದೆ. ವಿಂಟೇಜ್, ರೋಲ್ಸ್ ರಾಯ್, ಬೆನ್ಜ್, ಮಾರುತಿ ಕಾರು ಪರಿಸರ ಸ್ನೇಹಿ ಕಾರುಗಳು ಜಾಥದಲ್ಲಿ ಭಾಗವಹಿಸಿವೆ ಎಂದರು.