ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ಟೆಂಪೋ ಹರಿಸಿ ಮಹಿಳೆಯ ಸಾವಿಗೆ ಕಾರಣವಾಗಿದ್ದ ಚಾಲಕ ಮತ್ತು ಮಾಲೀಕನಿಗೆ ಕೋರ್ಟ್ ದಂಡದ ಜೊತೆ ಶಿಕ್ಷೆ ವಿಧಿಸಿ ಆದೇಶಿಸಿದೆ. ಟೆಂಪೋ ಚಾಲಕ ಮಂಜು (27) ಎಂಬಾತನಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ 5,500 ರೂ ದಂಡ ಮತ್ತು ಮಾಲೀಕ ಅನಿಲ್ (39) ಎಂಬಾತನಿಗೆ 7 ಸಾವಿರ ರೂ ದಂಡ ವಿಧಿಸಲಾಗಿದೆ.
4 ವರ್ಷದ ಹಿಂದೆ ಟೆಂಪೋ ಗುದ್ದಿ ಮಹಿಳೆ ಸಾವು: ಚಾಲಕನಿಗೆ 2 ವರ್ಷ ಜೈಲು - ನಾಲ್ಕು ವರ್ಷಗಳ ಹಿಂದೆ ಟೆಂಪೋ ಗುದ್ದಿ ಮಹಿಳೆ ಸಾವು ಪ್ರಕರಣದ ಆರೋಪಿಗೆ ಶಿಕ್ಷೆ
ರಾಜಾಜಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2018 ಜನವರಿ 5ರಂದು ಅಯ್ಯಪ್ಪ ಬೇಕರಿ ಅಂಡ್ ಸ್ವೀಟ್ಸ್ ಹತ್ತಿರದ ಸರ್ವೀಸ್ ರಸ್ತೆಯ ನಂದಿನಿ ಲೇಔಟ್ ಬಳಿ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ, ಮಹಿಳೆ ಸಾವನ್ನಪ್ಪಿದ ಪ್ರಕರಣ ಆರೋಪಿಗೆ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ರಾಜಾಜಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2018 ಜನವರಿ 5ರಂದು ಅಯ್ಯಪ್ಪ ಬೇಕರಿ ಅಂಡ್ ಸ್ವೀಟ್ಸ್ ಹತ್ತಿರದ ಸರ್ವೀಸ್ ರಸ್ತೆಯ ನಂದಿನಿ ಲೇಔಟ್ ಬಳಿ ಮಂಜು ಅತೀ ವೇಗವಾಗಿ ಗೊರಗುಂಟೆಪಾಳ್ಯದಿಂದ ಸುಮ್ಮನಹಳ್ಳಿ ಜಂಕ್ಷನ್ ಕಡೆಗೆ ವೇಗವಾಗಿ ಟೆಂಪೋ ಚಲಾಯಿಸಿಕೊಂಡು ಹೋಗುತ್ತಿದ್ದ. ಆಗ ರಸ್ತೆ ದಾಟುತ್ತಿದ್ದ ಮಹಿಳೆಗೆ ವಾಹನ ರಭಸವಾಗಿ ಡಿಕ್ಕಿ ಹೊಡೆದಿತ್ತು. ಪರಿಣಾಮ ಟೆಂಪೋ ಮುಂದಿನ ಎರಡು ಚಕ್ರಗಳು ಮಹಿಳೆ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದರು.
ಚಾಲಕ ಮತ್ತು ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ರಾಜಾಜಿನಗರ ಸಂಚಾರಿ ಠಾಣೆ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಸದ್ಯ ವಿಚಾರಣೆ ಮುಕ್ತಾಯಗೊಳಿಸಿರುವ ಕೋರ್ಟ್ ಆರೋಪಿ ಚಾಲಕನಿಗೆ ಶಿಕ್ಷೆ ಮತ್ತು ದಂಡ ಹಾಗೂ ಮಾಲೀಕನಿಗೆ 7 ಸಾವಿರ ರೂ ದಂಡ ವಿಧಿಸಿದೆ.