ಕರ್ನಾಟಕ

karnataka

ETV Bharat / state

ಬಿಗ್​ ಬಾಸ್​ : ಮನೆಯಿಂದ ಹೊರ ಬಂದ ಆರ್​ಜೆ ಪೃಥ್ವಿ - Kannada Big Boss News

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ದೊಡ್ಮನೆಯೊಳಗೆ ಕಾಲಿಟ್ಟಿದ್ದ ಪೃಥ್ವಿ ಈ ವಾರ ಎಲಿಮಿನೇಟ್​ ಆಗಿದ್ದಾರೆ.

ಮನೆಯಿಂದ ಹೊರ ಬಂದ ಆರ್​ಜೆ ಪೃಥ್ವಿ
ಮನೆಯಿಂದ ಹೊರ ಬಂದ ಆರ್​ಜೆ ಪೃಥ್ವಿ

By

Published : Dec 1, 2019, 2:51 AM IST

Updated : Dec 1, 2019, 4:08 PM IST

ಬೆಂಗಳೂರು : ವಾರಾಂತ್ಯದಲ್ಲಿ ವೀಕ್ಷಕರಿಗೆ ಇರುವ ಟೆನ್ಷನ್ ಒಂದೇ ! ಈ ವಾರ ಬಿಗ್​ ಬಾಸ್​ ಮನೆಯಿಂದ ಹೊರಹೋಗುವವರು ಯಾರು ಎಂಬುದು. ಕುತೂಹಲಕ್ಕೆ ತೆರೆ ಬಿದ್ದಿದ್ದು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ದೊಡ್ಮನೆಯೊಳಗೆ ಕಾಲಿಟ್ಟಿದ್ದ ಪೃಥ್ವಿ ಈ ವಾರ ಮನೆಯಿಂದ ಹೊರಬಂದಿದ್ದಾರೆ.

ಮನೆಯಲ್ಲಿ ಸತತ ನಾಲ್ಕು ವಾರಗಳ ಕಾಲ ದೊಡ್ಮನೆಯೊಳಗೆ ಇದ್ದ ಪೃಥ್ವಿ ಇದೀಗ ಎಲಿಮಿನೇಟ್ ಆಗಿದ್ದಾರೆ. ಈ ವಾರ ಮನೆಯಿಂದ ಹೊರ ಹೋಗಲು ಮನೆಯ ಸದಸ್ಯರಾದ ಶೈನ್ ಶೆಟ್ಟಿ, ಭೂಮಿ ಶೆಟ್ಟಿ, ಪೃಥ್ವಿ, ಕಿಶನ್, ಚಂದನ್ ಆಚಾರ್ ಹಾಗೂ ರಾಜು ತಾಳಿಕೋಟೆ ನಾಮಿನೇಟ್ ಆಗಿದ್ದರು, ಆದರೆ ಇವರನ್ನೆಲ್ಲ ಬಿಟ್ಟು ಆರ್ ಜೆ ಪೃಥ್ವಿ ಮನೆಯಿಂದ ಹೊರ ಬಂದಿದ್ದಾರೆ.

ವಿಭಿನ್ನ ಕಾಸ್ಟ್ಯೂಮ್, ವಿಚಿತ್ರ ಸ್ಟೈಲ್, ಉದ್ದ ಮೀಸೆ, ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ಪೃಥ್ವಿ ಬಿಗ್ ಬಾಸ್ ಮನೆಯಲ್ಲಿ ಟ್ರೆಂಡ್ ಸೆಟ್ ಮಾಡಿದ್ದರು. ಪೃಥ್ವಿ ಮೀಸೆಗೆ ಹಲವರು ಫಿದಾ ಆಗಿ ಫಾಲೋ ಮಾಡುತ್ತಿದ್ದರು. ಅಲ್ಲದೇ, ಟಾಸ್ಕ್ ಗಳಲ್ಲಿ ಅಂದರೆ ಈ ವಾರದ ನಾಲ್ಕು ಚಟುವಟಿಕೆಯಲ್ಲಿ ಮೂರರಲ್ಲಿ ಪೃಥ್ವಿ ಅವರಿಂದ ಅಧಿಕ ಅಂಕಗಳು ಕಳೆದುಕೊಂಡಿದ್ದಕ್ಕೆ ಕಳಪೆ ಬೋರ್ಡ್ ನೀಡಿ ಜೈಲಿಗೆ ಕಳುಹಿಸಿದರು.

ಕಳ್ಳ-ಪೊಲೀಸ್ ಟಾಸ್ಕ್ ನಲ್ಲಿ ಪೃಥ್ವಿ ಗೂಢಚಾರಿಯಾಗಿ ಗಮನ ಸೆಳೆದಿದ್ದರು. ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ನೀಡಲಾಗಿದ್ದ ಅವಾರ್ಡ್ ನಲ್ಲಿ 'ಮೋಸ ಮಾಡಲೆಂದೇ ಮನೆಗೆ ಬಂದೆಯಾ' ಅವಾರ್ಡ್ ಪೃಥ್ವಿ ಅವರಿಗೆ ನೀಡಲಾಗಿತ್ತು.ಕಿತ್ತಳೆ ಮಂಡಿ ಟಾಸ್ಕ್ ನಲ್ಲಿ ದೀಪಿಕಾ ಅವರ ಟೀ ಶರ್ಟ್ ಗೆ ಕೈ ಹಾಕುತ್ತೇನೆ ಎಂದು ಪೃಥ್ವಿ ಹೇಳಿಕೆ ನೀಡಿದ್ದರು. ನಂತರ ಕಿಚ್ಚ ಅವರು ದೀಪಿಕಾ ಅವರಿಗೆ ಇದೊಂದು ಸ್ಟ್ರಾಟಜಿ ಎಂದು ನಿಮಗೆ ಗೊತ್ತಾಗಲಿಲ್ಲವೆ ಎಂದಿದ್ದರು.

ಒಟ್ಟಾರೆ ನಾಲ್ಕು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಪೃಥ್ವಿ, ಇದೀಗ ಆಟ ಮುಗಿಸಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.

Last Updated : Dec 1, 2019, 4:08 PM IST

ABOUT THE AUTHOR

...view details