ಕರ್ನಾಟಕ

karnataka

ETV Bharat / state

ಜಲಮೂಲ ಸೇರುತ್ತಿದೆ ಕಾರ್ಖಾನೆಗಳ ವಿಷ: ಕ್ರಮ ಕೈಗೊಳ್ಳದ ಅಧಿಕಾರಿಗಳು - Rivers and water bodies getting irretrievably polluted

ಲೋಹದ ಕೈಗಾರಿಕೆಗಳು, ಜವಳಿ ಕಾರ್ಖಾನೆ, ಅಕ್ಕಿ ಮಿಲ್ ಸೇರಿದಂತೆ ಇನ್ನೂ ಹಲವು ಕಾರ್ಖಾನೆಗಳು ತಡರಾತ್ರಿ ಅಥವಾ ಬೆಳಗಿನ ಜಾವದ ಸಮಯದಲ್ಲಿ ತ್ಯಾಜ್ಯದ ನೀರನ್ನು ನದಿಗೆ ಹರಿಸುತ್ತಿವೆ. ಅಂತಹ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಗೆ ಪರಿಸರ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Rivers and water bodies getting irretrievably polluted
ಜಲಮೂಲಗಳಿಗೆ ಸೇರುತ್ತಿದೆ ಕಾರ್ಖಾನೆಗಳ ವಿಷ;

By

Published : Dec 24, 2020, 10:20 PM IST

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆಗಳ ಸಂಖ್ಯೆ ಹೆಚ್ಚಳದಿಂದ ತ್ಯಾಜ್ಯ ಸಂಸ್ಕರಣೆ ಮಾಡಲು ಸಂಸ್ಕರಣಾ ಘಟಕಗಳ ಕೊರತೆ ಕಾಡುತ್ತಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 2018-2019ರ ವರದಿ ಪ್ರಕಾರ 11 ಸಂಸ್ಕರಣಾ ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಸಾಮೂಹಿಕ ಕಲುಷಿತ ನೀರು ಶುದ್ಧೀಕರಣ ಘಟಕಗಳ ಸ್ಥಾವರಗಳು ನಿತ್ಯ 7,375 ಲೀಟರ್ ತ್ಯಾಜ್ಯ​​ ನೀರನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ...ಗ್ರಾಪಂ ಮೊದಲ ಹಂತದ ಚುನಾವಣೆಯಲ್ಲಿ ಶೇ. 82.13ರಷ್ಟು ಮತದಾನ...ಯಾವ ಜಿಲ್ಲೆಯಲ್ಲಿ ಎಷ್ಟು ನೋಡಿ

ಇನ್ನು ಕೆಲ ದೊಡ್ಡ ಕೈಗಾರಿಕೆಗಳಲ್ಲಿ ಸಂಸ್ಕರಣಾ ಘಟಕಗಳಿದ್ದರೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಸಂಸ್ಕರಣಾ ಘಟಕಗಳೇ ಇಲ್ಲ. ನಗರದ ಪೀಣ್ಯ, ರಾಜಾಜಿನಗರ, ಕುಂಬಳಗೋಡು ಪ್ರದೇಶಗಳಲ್ಲಿರುವ ಕಾರ್ಖಾನೆಗಳು ವೃಷಭಾವತಿ ನದಿಗೆ ವಿಷವನ್ನು ಉಗುಳುತ್ತಿವೆ. ಇದರಿಂದ ಪರಿಸರಕ್ಕೆ ಮಾರಕ ಮತ್ತು ಕೆಟ್ಟ ವಾಸನೆ ಜೊತೆಗೆ ಆರೋಗ್ಯ ಸಮಸ್ಯೆಯೂ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಲೋಹದ ಕೈಗಾರಿಕೆಗಳು, ಜವಳಿ ಕಾರ್ಖಾನೆ, ಅಕ್ಕಿ ಮಿಲ್ ಸೇರಿದಂತೆ ಇನ್ನೂ ಹಲವು ಕಾರ್ಖಾನೆಗಳು ತಡರಾತ್ರಿ ಅಥವಾ ಬೆಳಗಿನ ಜಾವದ ಸಮಯದಲ್ಲಿ ತ್ಯಾಜ್ಯದ ನೀರನ್ನು ನದಿಗೆ ಹರಿಸುತ್ತಿವೆ. ಅಂತಹ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಗೆ ಪರಿಸರ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಲಮೂಲ ಸೇರುತ್ತಿದೆ ಕಾರ್ಖಾನೆಗಳ ವಿಷ

ಕೊಪ್ಪಳ ಜಿಲ್ಲೆಯಲ್ಲೂ ಸಹ ಸಂಸ್ಕರಿಸದೆಯೇ ಯಥಾವತ್ತಾಗಿ ತ್ಯಾಜ್ಯ ನೀರು ಜಲಮೂಲ ಸೇರುತ್ತಿದೆ. ತುಂಗಭದ್ರಾ ನದಿ, ಹಿರೇಹಳ್ಳ ಸೇರಿದಂತೆ ಅನೇಕ ಜಲಮೂಲಗಳಿಗೆ ತಾಜ್ಯ ನೀರು ಸೇರುತ್ತಿದ್ದರೂ ಅಧಿಕಾರಿ ವರ್ಗ ಕಣ್ಮುಚ್ಚಿ ಕುಳಿತಿದೆ. ನಗರಸಭೆಯಿಂದ ನಿತ್ಯ 10 ಎಂಎಲ್​ಡಿ ನೀರು ಪೂರೈಸಲಾಗುತ್ತಿದ್ದು, ಅದರಲ್ಲಿ 6ರಿಂದ 8 ಎಂಎಲ್​​ಡಿ ತ್ಯಾಜ್ಯ ನೀರು ನದಿ, ಕೆರೆಗಳಿಗೆ ಸೇರುತ್ತಿದೆ. ಈ ಬಗ್ಗೆ ಗಮನ ನೀಡಬೇಕಾದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇದ್ದೂ ಇಲ್ಲದಂತಿದೆ. ತ್ಯಾಜ್ಯ ನೀರು ಜಲಮೂಲ ಸೇರುತ್ತಿದ್ದು, ಅದರ ಫಲಿತಾಂಶ ಮುಂದಿನ ದಿನಗಳಲ್ಲಿ ಅರಿವಿಗೆ ಬರಲಿದೆ.

ABOUT THE AUTHOR

...view details