ಕರ್ನಾಟಕ

karnataka

ETV Bharat / state

ಬೆಂಕಿ ಹಚ್ಚಲು 25 ಲೀ. ಪೆಟ್ರೋಲ್, ಡೀಸೆಲ್, ಸೀಮೆ ಎಣ್ಣೆ ಬಳಕೆ: ಎಫ್​ಎಸ್​ಎಲ್ ವರದಿಯಲ್ಲಿ ಇಂಚಿಂಚು ಮಾಹಿತಿ - ಬೆಂಗಳೂರು ಗಲಭೆ ಲೇಟೆಸ್ಟ್ ನ್ಯೂಸ್

ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆಕೋರರು ಪೆಟ್ರೋಲ್, ಡೀಸೆಲ್, ಸೀಮೆ ಎಣ್ಣೆಯನ್ನು ತಂದು ವಾಹನಗಳ ಮೇಲೆ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಎಫ್​ಎಸ್ಎಲ್ ರಿಪೋರ್ಟ್​ನಲ್ಲಿ ಬಹಿರಂಗವಾಗಿದೆ.

rioters brought 25 liter fuel for destruction
ಡಿ.ಜೆ ಹಳ್ಳಿ ಕೆ.ಜಿ ಹಳ್ಳಿ ಗಲಭೆ

By

Published : Aug 16, 2020, 12:29 PM IST

ಬೆಂಗಳೂರು:ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ‌ ಎಫ್ಎಸ್ಎಲ್ ರಿಪೋರ್ಟ್​ನಲ್ಲಿ ಗಲಭೆಕೋರರ ಅಸಲಿಯತ್ತು ಬಯಲಾಗಿದ್ದು, ಪ್ರಾಥಮಿಕ ಎಫ್​ಎಸ್ಎಲ್ ರಿಪೋರ್ಟ್ ಆಧಾರದ ಮೇರೆಗೆ ಖಾಕಿ ಪಡೆ ಮತ್ತಷ್ಟು ತನಿಖೆ ಚುರುಕುಗೊಳಿಸಿದೆ.

25 ಲೀಟರ್ ಇಂಧನ ತಂದಿದ್ದ ಗಲಭೆಕೋರರು:

ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಪ್ರಕರಣ ಸಂಬಂಧಿಸಿದಂತೆ ಸದ್ಯ ಎಫ್​ಎಸ್​ಎಲ್ ತಂಡ ಸ್ಥಳಕ್ಕೆ ‌ಬಂದು ಪರಿಶೀಲನೆ ನಡೆಸಿ ಪೊಲೀಸ್ ಇಲಾಖೆಗೆ ಪ್ರಾಥಮಿಕ ತನಿಖಾವರದಿಯನ್ನ ಕೊಟ್ಟಿದ್ದಾರೆ. ಕಿಡಿಗೇಡಿಗಳು ಯಾರಿಗೂ ಗೊತ್ತಿಲ್ಲದಂತೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಆರೋಪಿಗಳು ಒಂದು ಕಡೆ ಪೆಟ್ರೋಲ್ ಮತ್ತೊಂದು ಕಡೆಯಿಂದ ಡೀಸೆಲ್, ಸೀಮೆ ಎಣ್ಣೆ ತಂದು ಠಾಣೆ ಬಳಿ ಮತ್ತು ಶಾಸಕರ ಮನೆ ಮೇಲೆ ಸುರಿದಿದ್ದಾರೆ. ವಾಹನದ ಮೇಲ್ಮೈ ಅನ್ನು ಪರೀಕ್ಷೆಗೆ ತೆಗೆದುಕೊಂಡಾಗ ಈ ವಿಚಾರ ಬಹಿರಂಗವಾಗಿದೆ.

ಎಫ್ಎಸ್ಎಲ್ ಟೀಂ ತನಿಖೆ ನಡೆಸಿದಾಗ ವಾಹನದ ಮೇಲೆ ಸೀಮೆ ಎಣ್ಣೆ, ಪೆಟ್ರೋಲ್, ಡೀಸೆಲ್ ಹಾಕಿರುವುದು ಖಚಿತವಾಗಿದೆ. ವಾಹನ ಭಸ್ಮ ಮಾಡೋಕೆ ಮೊದಲೇ ಪ್ಲಾನ್ ಮಾಡಿದ್ದು, ವಾಹನದ ಪೆಟ್ರೋಲ್ ಟ್ಯಾಂಕ್ ಬಿಚ್ಚೋಕೆ ಹರಿತವಾದ ಆಯುಧ ಬಳಸಿದ್ದಾರೆ. ಚಿಕ್ಕ ಚಿಕ್ಕ ವಾಹನದ ಬಟ್ಟೆಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾರೆ. ಸದ್ಯ ಗಲಭೆಕೋರರ ಬಹುದೊಡ್ಡ ಮತ್ತೊಂದು ಮುಖವಾಡ ಬಯಲಾಗಿದ್ದು, ಇತ್ತ ಖಾಕಿ ಟೀಂ ಕಿಡಿಗೇಡಿಗಳು ಎಲ್ಲಿಂದ ಪೆಟ್ರೋಲ್ ಡೀಸೆಲ್ ತಂದಿದ್ರು ಎಂಬ ಮಾಹಿತಿಯನ್ನ ಕಲೆ ಹಾಕುತ್ತಿದೆ. ಯಾಕಂದ್ರೆ ಪೆಟ್ರೋಲ್ ಡಿಸೆಲ್ ಮತ್ತು ಸೀಮೆ ಎಣ್ಣೆಯನ್ನು ಆರೋಪಿಗಳಿಗೆ ಯಾರು ಕೊಟ್ಟರು ಅನ್ನೋದು ಕೂಡ ಪ್ರಮುಖವಾಗುತ್ತದೆ.

ABOUT THE AUTHOR

...view details