ಬೆಂಗಳೂರು: 1999 ರಿಂದ ನಾನು ಸಂಗೀತಾಭ್ಯಾಸ ಮಾಡುತ್ತಿದ್ದೇನೆ. ನಾನು ಓದಿದ್ದು, ಸಂಗೀತ ಕಲಿತಿದ್ದು ಬೆಂಗಳೂರಿನಲ್ಲೇ ಎಂದು ಗ್ರಾಮಿ ವಿಜೇತ ರಚನೆಕಾರ ರಿಕ್ಕಿ ಕೇಜ್ ನಗರದಲ್ಲಿ ನಡೆಯುತ್ತಿರುವ ಜಿಇಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಭಿಪ್ರಾಯಪಟ್ಟರು.
ಭಾರತದ ಸಂಗೀತವನ್ನು ವೃತ್ತಿ ಎಂದು ಪರಿಗಣಿಸಬೇಕು: ರಿಕ್ಕಿ ಕೇಜ್ - ಗ್ರಾಮೀ ವಿಜೇತ ರಿಕ್ಕಿ ಕೇಜ್
ಸಂಗೀತವನ್ನು ವೃತ್ತಿ ಎಂದು ಪರಿಗಣಿಸಿದರೆ ಸಂಗೀತಗಾರರಿಗೆ ಮಾತ್ರವಲ್ಲ, ಇದರಿಂದ ಇತರೆ ವಲಯಗಳೂ ಬೆಳೆಯುತ್ತವೆ ಎಂದು ಗ್ರಾಮಿ ವಿಜೇತ ಸಂಗೀತ ರಚನೆಕಾರ ರಿಕ್ಕಿ ಕೇಜ್ ಹೇಳಿದರು.
ಭಾರತದಲ್ಲಿ ಸಂಗೀತವನ್ನು ಒಂದು ಕೆಲಸ ಎಂದು ಪರಿಗಣಿಸಿಲ್ಲ. ಅದೇ ಬೇರೆ ದೇಶಗಳಲ್ಲಿ ಹೀಗಿಲ್ಲ. ಸಂಗೀತವನ್ನು ವೃತ್ತಿ ಎಂದು ಪರಿಗಣಿಸಿದರೆ ಸಂಗೀತಗಾರರಿಗೆ ಮಾತ್ರವಲ್ಲ, ಇದರಿಂದ ಇತರೆ ವಲಯಗಳೂ ಬೆಳೆಯುತ್ತವೆ ಎಂದು ರಿಕ್ಕಿ ಕೇಜ್ ವಿವರಿಸಿದರು.
ಒಂದು ಸಂಗೀತ ಕಾರ್ಯಕ್ರಮದಲ್ಲಿ 100 ಜನ ಕೆಲಸ ಮಾಡುತ್ತಾರೆ. ಈ ರೀತಿ ಮಾಡಲು ಭಾರತದಲ್ಲಿ ಅವಕಾಶವಿಲ್ಲ. ವಿಪರ್ಯಾಸ ಅಂದ್ರೆ, ಭಾರತದಲ್ಲಿ ಒಂದು ಸಿಂಫನಿ ಸಂಗೀತ ತಂಡವಿಲ್ಲ. ಬೇರೆ ದೇಶಗಳಲ್ಲಿ ಯಾರೇ ವಿಐಪಿಗಳು ಬಂದರೂ ಸಂಗೀತ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗುತ್ತಾರೆ. ನಮ್ಮ ದೇಶದಲ್ಲಿ ಈ ರೀತಿಯ ಮೂಲಭೂತ ವ್ಯವಸ್ಥೆ ಪ್ರಾರಂಭವಾಗಬೇಕು ಎಂದು ಹೇಳಿದರು.